ಕರ್ನಾಟಕ

karnataka

ETV Bharat / state

ಮುಂಬೈಗೆ ಅತೃಪ್ತ ಶಾಸಕರು... ಅತ್ತ ಸ್ಪೀಕರ್ ತಮಿಳುನಾಡಿನತ್ತ! - ಮೈತ್ರಿ ಸರ್ಕಾರ ಪತನ

ಶಾಸಕರ ರಾಜೀನಾಮೆ

By

Published : Jul 6, 2019, 12:49 PM IST

Updated : Jul 6, 2019, 7:18 PM IST

2019-07-06 19:16:39

ತಮಿಳುನಾಡಿನತ್ತ ಸ್ಪೀಕರ್ ರಮೇಶ್ ಕುಮಾರ್​!

ಹುಟ್ಟೂರು ಅಡ್ಡಗಲ್​ನಿಂದ ತಮಿಳುನಾಡಿನ ವೆಲ್ಲೂರಿಗೆ ಹೊರಡಲಿರುವ ಸ್ಪೀಕರ್ ರಮೇಶ್ ಕುಮಾರ್
ಸಂಬಂದಿಕರೊಬ್ಬರ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ಹೊರಡಲಿರುವ ರಮೇಶ್ ಕುಮಾರ್
ಮಂಗಳವಾರ ತಮ್ಮ‌ ಕಚೇರಿಗೆ ಹೋದ ನಂತರ ರಾಜೀನಾಮೆ ಪತ್ರಗಳ ಪರಿಶೀಲನೆ.
ಸದ್ಯ ಊರಿಗೆ ಯಾರಾದ್ರು ಬಂದರೂ ರಾಜೀನಾಮೆ ಸ್ವೀಕರಿಸೋದಿಲ್ಲ.
ರಾಜೀನಾಮೆ ಏನಿದ್ರು ಕಚೇರಿಗೆ ಬಂದು ನೀಡಲಿ, ಈವರೆಗೂ ಯಾರೂ ನನ್ನ ಬಳಿ ಸಮಯ ತೆಗೆದುಕೊಂಡಿಲ್ಲ.

2019-07-06 18:47:37

  • ಹೆಚ್​ಎಎಲ್ ವಿಮಾನ ನಿಲ್ದಾಣದಿಂದ ಟೇಕಾಫ್​ ಆದ ಅತೃಪ್ತ ಶಾಸಕರು
  • ವಿಶೇಷ ವಿಮಾನದಲ್ಲಿ ಅತೃಪ್ತ ಶಾಸಕರು ಟೇಕಾಫ್​​
  • ಮುಂಬೈನ ಹೊಟೇಲ್​ಗೆ ಪ್ರಯಾಣ ಬೆಳೆಸಿದ ಶಾಸಕರು
  • ಗೋವಾಕ್ಕೆ ಪ್ರಯಾಣ ಬೆಳೆಸಿದ ಬಿಸಿ ಪಾಟೀಲ್​

2019-07-06 17:42:06

ವಿಶ್ವನಾಥ್​ ಸುದ್ದಿಗೋಷ್ಠಿಯಲ್ಲಿ ಹೇಳಿಕೆ

ರಾಜೀನಾಮೆಗೆ ಮುಂದಾದ 8 ಶಾಸಕರು

14 ಶಾಸಕರ ರಾಜೀನಾಮೆ: ವಿಶ್ವನಾಥ್​ ಸ್ಪಷ್ಟನೆ
ನಾವು ಯಾವುದೇ ಆಪರೇಷನ್​ ಕಮಲದಿಂದ ಪ್ರಭಾವಿತರಾಗಿಲ್ಲ
 ಒಟ್ಟು 14 ಶಾಸಕರು ರಾಜೀನಾಮೆ ಸಲ್ಲಿಕೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ ವಿಶ್ವನಾಥ್​
ಗವರ್ನರ್​ಗೆ ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಿದ್ದೇವೆ
ಮೈತ್ರಿ ಸರ್ಕಾರ ಜನರ ಆಕಾಂಕ್ಷೆಗಳಿಗೆ ತಲುಪುವಲ್ಲಿ ವಿಫಲಗೊಂಡಿದೆ
ದ್ದು, ಹೀಗಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. 
ನಾವು ಎಲ್ಲರೂ ಒಗ್ಗಟ್ಟಿನಿಂದ ರಾಜೀನಾಮೆ ನೀಡಿದ್ದು, ಇದರಲ್ಲಿ ಬೇರೆ ಯಾವುದೇ ಪಕ್ಷದ ಮುಖಂಡರ ಕೈವಾಡವಿಲ್ಲ

2019-07-06 17:41:03

ಮೈತ್ರಿ ಸರ್ಕಾರದ ರಾಜೀನಾಮೆ ಸರ್ಕಸ್​

ಮೈತ್ರಿ ಸರ್ಕಾರದ ರಾಜೀನಾಮೆ ಸರ್ಕಸ್​
ನಾಳೆ ಬೆಂಗಳೂರಿಗೆ ಸಿಎಂ ಹೆಚ್​ಡಿಕೆ, ಗುಂಡೂರಾವ್​ ವಾಪಸ್​​

2019-07-06 16:36:52

ಡಿಕೆಶಿ ನಿವಾಸದಲ್ಲಿ ನಡೆದ ಸಭೆ ವಿಫಲ

ಸಚಿವ ಡಿಕೆ ಶಿವಕುಮಾರ್ ನಿವಾಸದಲ್ಲಿ ಅತೃಪ್ತ ಶಾಸಕರ ಸಭೆ ವಿಫಲ
ಶಾಸಕರಾದ ರಾಮಲಿಂಗಾ ರೆಡ್ಡಿ , ಎಸ್ ಟಿ ಸೋಮಶೇಖರ್ , ಬೈರತಿ ಬಸವರಾಜ್, ಮುನಿರತ್ನ ಅವರನ್ನು ತಮ್ಮ ನಿವಾಸಕ್ಕೆ ಕರೆತಂದ ಡಿಕೆ ಶಿವಕುಮಾರ್
ಸಂಧಾನಕ್ಕೆ ನಡೆಸಿದ ಯತ್ನ ಫಲ ಕೊಟ್ಟಿಲ್ಲ
ಮುನಿರತ್ನ ಹಾಗೂ ಇತರೆ ಶಾಸಕರು ಮರಳಿ ಸ್ಪೀಕರ್ ಕಚೇರಿಗೆ ತೆರಳಿ ಮತ್ತೆ ರಾಜೀನಾಮೆ ಪತ್ರ ಸಲ್ಲಿಸಲು ರಾಜಭವನಕ್ಕೆ 
ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. 
ನನ್ನ ರಾಜೀನಾಮೆ ಕಾರಣ ಮಾಧ್ಯಮಗಳಿಗೆ ಗೊತ್ತು. ನಾನು ಅತೃಪ್ತರ ಗುಂಪಿನಲ್ಲಿ ನಾನು ಇಲ್ಲ. ನಾನು ಒಬ್ಬಂಟಿಯಾಗಿ ರಾಜೀನಾಮೆ ಕೊಟ್ಟಿದ್ದೇನೆ 
ನಾನು ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯುವ ಮಾತಿಲ್ಲ: ರಾಮಲಿಂಗರೆಡ್ಡಿ 

2019-07-06 16:17:33

ಶಾಸಕರ ರಾಜೀನಾಮೆ ಪರ್ವ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ
ಡಿಕೆ ಶಿವಕುಮಾರ್​ ಎಂಟ್ರಿ ಕೊಟ್ಟಿದ್ದಾರೆ: ಕಾಯ್ದು ನೋಡೋಣ
ಶಾಸಕರನ್ನ ಸಂಪರ್ಕ ಮಾಡ್ತಾ ಇದೀವಿ ಅವರು ಸಿಗ್ತಾ ಇಲ್ಲ
ಡಿಕೆಶಿ ನಾಲ್ಕು ಜನರನ್ನ ಕರಕ್ಕೊಂಡು ಮನೆಗೆ ಹೋಗಿದ್ದಾರೆ
ಉಳಿದವರು ಯಾರು ಕೂಡ ಸಂಪರ್ಕಕ್ಕೆ ಸಿಗ್ತಾ ಇಲ್ಲ
ರಾಜೀನಾಮೆ ಇಲ್ಲಿಯವರೆಗೆ ಅಂಗೀಕಾರ ಆಗಿಲ್ಲ..‌ಸರ್ಕಾರಕ್ಕೆ ಯಾವುದೇ ಹಾನಿ ಇಲ್ಲ 
ರಾಜ್ಯ ಸರ್ಕಾರಕ್ಕೆ ಏನೂ ಆಗಲ್ಲ: ಸಿದ್ದರಾಮಯ್ಯ 

ಈಶ್ವರ್ ಖಂಡ್ರೆ ಪ್ರತಿಕ್ರಿಯೆ
ಎಲ್ಲರನ್ನು ಮನವೊಲಿಸೋ ಪ್ರಯತ್ನ ಮಾಡಿದ್ದೇವೆ
ಶಾಸಕರು ಕೂಡ ಸ್ಪಂದನೆ‌ ಮಾಡಿದ್ದಾರೆ..‌ನೋಡೋಣ ಏನಾಗುತ್ತೆ ಎಂದು
ರಾಮಲಿಂಗಾರೆಡ್ಡಿ ತಮ್ಮ ಮೇಲೆ ಗರಂ ಆಗಿರೋದು ಊಹಾಪೋಹ
ರಾಮಲಿಂಗಾರೆಡ್ಡಿ ಪಕ್ಷಕ್ಕೆ ತುಂಬಾ ನಿಷ್ಟರಾಗಿದ್ದಾರೆ
ಅವರು ಯಾವ ಕಾರಣಕ್ಕಾಗಿ ರಾಜೀನಾಮೆ ಕೊಡಲು ಹೋಗಿದ್ದಾರೆ ಅಂತ ಆಲೋಚನೆ‌ ಮಾಡಬೇಕಾಗಿದೆ

ನಮ್ಮ‌ ಮುಂದೆ ಎಲ್ಲ ಆಯ್ಕೆಗಳು ಇವೆ.ಎಲ್ಲಾ ಕಾಂಗ್ರೆಸ್ ನ ವರಿಷ್ಟರು ಹಾಗೂ ಹೈ ಕಂಮಾಡ್ ತೀರ್ಮಾನ ಮಾಡ್ತಾರೆ

2019-07-06 15:19:25

ಜೆಡಿಎಸ್​​ನ 3, ಕಾಂಗ್ರೆಸ್​ 8 ಜನ ಅತೃಪ್ತ ಶಾಸಕರಿಂದ ರಾಜೀನಾಮೆ

ಬೆಂಗಳೂರು : ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್​ನ ಮೂವರು ಹಾಗೂ ಕಾಂಗ್ರೆಸ್ ಪಕ್ಷದ 8 ಜನ ಅತೃಪ್ತ ಶಾಸಕರು ಸ್ಪೀಕರ್ ಕಚೇರಿಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.

ಜೆಡಿಎಸ್ ಪಕ್ಷದ ದಿಂದ... 

  • ಹುಣಸೂರು ಶಾಸಕ ಹೆಚ್ ವಿಶ್ವನಾಥ್,
  • ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ, 
  • ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ...

  • ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ,
  • ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ,
  • ಅಥಣಿ ಶಾಸಕ ಮಹೇಶ್ ಕುಮಟಳ್ಳಿ, 
  • ಮಸ್ಕಿ ಶಾಸಕ ಪ್ರತಾಪ್ ಗೌಡ, 
  • ಹಿರೇಕೇರೂರು ಶಾಸಕ ಬಿ.ಸಿ ಪಾಟೀಲ್, 
  • ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, 
  • ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್, 
  • ಕೆಆರ್ ಪುರಂ ಶಾಸಕ ಭೈರತಿ ಬಸವರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅತೃಪ್ತರ ಜತೆ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ತೆರಳಿದ್ದರಾದರೂ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ‌ನೀಡಿರುವುದಿಲ್ಲ.

ರಾಮಲಿಂಗಾರೆಡ್ಡಿ ಪುತ್ರಿ ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ಸಹ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. 

2019-07-06 14:50:47

11 ಜನ ಶಾಸಕರು ರಾಜೀನಾಮೆ: ಸ್ಪೀಕರ್​ ಘೋಷಣೆ

11 ಜನ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಸ್ಪೀಕರ್​ ರಮೇಶ್​ ಕುಮಾರ್​ ಸ್ಪಷ್ಟಪಡಿಸಿದ್ದಾರೆ. 

ಯಾರ್ಯಾರು ಶಾಸಕರು ರಾಜೀನಾಮೆ ನೀಡಿದ್ದಾರೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.  

2019-07-06 14:32:02

ಕಾಂಗ್ರೆಸ್​ ನಾಯಕರ ಮಹತ್ವದ ಸಭೆ: ಪಕ್ಷದಲ್ಲಿ ಆತಂಕ

ಬಿಎಂಎಸ್ ಪ್ಲಾಡಿಯಂನಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸುತ್ತಿದ್ದಾರೆ.  ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ಜಮೀರ್ ಅಹ್ಮದ್, ಪರಮೇಶ್ವರ್, ಎಂ ಬಿ ಪಾಟೀಲ್ , ಪ್ರಿಯಾಂಕ್ ಖರ್ಗೆ ಸಭೆ ಸೇರಿದ್ದರು.

ಸಭೆ ಮುಗಿದಿದ್ದು ಕೆಲವರು ಪ್ಲಾಡಿಯಂನಿಂದ ತೆರಳಿದ್ದಾರೆ ಎಂಬ ಸುದ್ದಿ ಬಂದಿದೆ.  ಈ  ನಡುವೆ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಸಚಿವ  ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಲು ನಿರಾಕರಣೆ ಮಾಡಿದ್ದಾರೆ.  

ಈ ನಡುವೆ ಸಿದ್ಧರಾಮಯ್ಯ, ಪರಮೇಶ್ವರ್ , ಈಶ್ವರ್ ಖಂಡ್ರೆ, ಜಮೀರ್ ಅಹ್ಮದ್ ಅವರು ಮತ್ತೊಂದು ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.  ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಬಿಎಮ್ ಎಸ್ ಪ್ಲಾಡಿಯಂ ಕಟ್ಟಡ ಇದೆ.

2019-07-06 14:26:56

ಅತೃಪ್ತರ ಜೊತೆ ಬಿಎಸ್​​ವೈ ಆಪ್ತ ಸಂತೋಷ; ತೀವ್ರಗೊಂಡ ಕುತೂಹಲ!

ಸಂತೋಷ್​

ಬೆಂಗಳೂರು:ಶಾಸಕ ಸ್ಥಾನಕ್ಕೆ ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ನೀಡುತ್ತಿರುವುದರ ಹಿಂದೆ ಬಿಜೆಪಿ ಇದೆ ಎನ್ನುವುದಕ್ಕೆ ಪೂರಕವಾಗಿ ಅತೃಪ್ತರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಕಾಣಿಸಿಕೊಂಡಿರುವುದು ಪುಷ್ಟಿ ನೀಡಿದೆ.

ಜೆಡಿಎಸ್ ನ ಮಾಜಿ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಅತೃಪ್ತ ಶಾಸಕರು ವಿಧಾನಸೌಧಕ್ಕೆ ತೆರಳುವ ಮುನ್ನ ಯು.ಬಿ ಸಿಟಿಯ ಹೋಟೆಲ್ ಒಂದರಲ್ಲಿ ಸೇರಿ ಸಮಾಲೋಚನೆ ನಡೆಸಿದರು. ಎಲ್ಲರೂ ಒಟ್ಟಾಗಿಯೇ ಹೋಗಿ ರಾಜೀನಾಮೆ ನೀಡುವ ಕುರಿತು ನಿರ್ಧಾರ ಕೈಗೊಂಡು ಹೋಟೆಲ್ ನಿಂದ ನಿರ್ಗಮಿಸಿದರು.

ಅತೃಪ್ತರು ಹೋಟೆಲ್ ನಿಂದ ನಿರ್ಗಮಿಸುವ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಕಾಣಿಸಿಕೊಂಡರು, ವಿಶ್ವನಾಥ್ ಸೇರಿದಂತೆ ಅತೃಪ್ತ ಶಾಸಕರೊಂದಿಗೆ ಮಾತುಕತೆ ನಡೆಸಿದರು.ಇದು ಆಪರೇಷನ್ ಹಿಂದ ಬಿಜೆಪಿ ಇದೆ ಎನ್ನುವುದಕ್ಕೆ ನಿದರ್ಶನವಾಗಿದೆ.

ಯಡಿಯೂರಪ್ಪ ಅಣತಿ ಮೇರೆಗೆ ಸಂತೋಷ್ ಅತೃಪ್ತರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ, ಯಡಿಯೂರಪ್ಪ ಸಂದೇಶ ತಲುಪುತ್ತಿದ್ದಂತೆ ಅತೃಪ್ತರು ವಿಧಾನಸೌಧದ ಕಡೆ ಹೊರಟರು ಎನ್ನುವ ಮಾಹಿತಿ ಲಭ್ಯವಾಗಿದೆ.

2019-07-06 14:25:16

ಸ್ಪೀಕರ್​ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ: ರಾಜಭವನದತ್ತ ಅತೃಪ್ತರು

ಬೆಂಗಳೂರು:ಮೈತ್ರಿ ಸರ್ಕಾರ ಉರುಳುವ ಸಾಧ್ಯತೆ ಹೆಚ್ಚಾಗುತ್ತಿದ್ದು, ಅತೃಪ್ರ 9 ಶಾಸಕರು ಸ್ಪೀಕರ್​ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದಾರೆ. 

ಸ್ಪೀಕರ್​ ಕೈಗೆ ಸಿಗದ ಹಿನ್ನೆಲೆಯಲ್ಲಿ ರಾಜೀನಾಮೆ ಪತ್ರವನ್ನು ಆಪ್ತ ಕಾರ್ಯದರ್ಶಿ ರೂಪಶ್ರೀ ಅವರಿಗೆ ಸಲ್ಲಿಸಿದ್ದು, ರಾಜಭವನದತ್ತ ಪ್ರಯಾಣ ಬೆಳೆಸಿದ್ದಾರೆ. 

ರಾಜ್ಯಪಾಲರನ್ನು ಭೇಟಿಯಾಗಲಿರುವ ಅತೃಪ್ತರು ಕಾನೂನು ಪ್ರಕಾರ ತಾವು ರಅಜೀನಾಮೆ ಪತ್ರವನ್ನು ಸ್ಪೀಕರ್​ ಕಚೇರಿಗೆ ತಲುಪಿಸಿದ್ದು, ಅದನ್ನು ಅಂಗೀಕರಿಸಲು ಕೋರಲಿದ್ದಾರೆ. 


 

2019-07-06 14:21:32

ರಾಮಲಿಂಗಾ ರೆಡ್ಡಿ ಸೇರಿ 9 ಮಂದಿ ರಾಜೀನಾಮೆ ಖಚಿತ.. ಕುಮಾರ ಸರ್ಕಾರಕ್ಕೆ ಕಂಟಕ!

ರಾಮಲಿಂಗಾ ರೆಡ್ಡಿ ಸೇರಿ 8 -10 ಶಾಸಕರು ಸ್ಪೀಕರ್​ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ಇನ್ನು ಶಾಸಕರಾದ ಬೈರತಿ ಬಸವರಾಜು, ಎಸ್​,.ಟಿ. ಸೋಮಶೇಖರ್​ ಹಾಗೂ ಮುನಿರತ್ನ ಈ ಶಾಸಕರ ಮನವೊಲಿಕೆಗೆ ತೆರಳಿದ್ದರು ಎನ್ನಲಾಗಿದೆ. ಇವರು ರಾಜೀನಾಮೆ ನೀಡಿದ್ದಾರೋ  ಇಲ್ಲವೋ ಎಂಬ ಬಗ್ಗೆ ಇದುವರೆಗೂ ಖಚಿತತೆ ಸಿಕ್ಕಿಲ್ಲ. 

2019-07-06 14:12:27

ಡಿಕೆ ಶಿವಕುಮಾರ್​ ಪ್ರತಿಕ್ರಿಯೆ

ಅತೃಪ್ತ ಶಾಸಕರ ರಾಜೀನಾಮೆ ಹಿನ್ನೆಲೆ ಸಚಿವ ಡಿಕೆ ಶಿವಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ.  

2019-07-06 13:52:17

ಹೈಕಮಾಂಡ್​ಗೆ ಮಾಹಿತಿ ನೀಡಿದ ಕೈ ನಾಯಕರು

ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್ ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಿರುವ ಬೆಳವಣಿಗೆ ಮಧ್ಯೆ ಕಾಂಗ್ರೆಸ್ ಪಕ್ಷ ಹೈಕಮಾಂಡ್​ಗೆ ಮಾಹಿತಿ ನೀಡಿದೆ.

ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಬರಬಹುದು. ಸರ್ಕಾರ ಪತನವಾಗಬಹುದು ಎಂಬುವ ಅಭಿಪ್ರಾಯವನ್ನ ರಾಜ್ಯ ಕಾಂಗ್ರೆಸ್ ಮುಖಂಡರು ಹೈಕಮಾಂಡ್​ಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ರಾಜ್ಯದ ಕಾಂಗ್ರೆಸ್​ ಮುಖಂಡರ ನಡುವೆ ಮಾತುಕತೆ ನಡೆಸುತ್ತಿದೆ. 

2019-07-06 13:50:03

ರಾಜೀನಾಮೆ ವಿಷಯ ಖಚಿತಪಡಿಸಿದ ರಾಮಲಿಂಗಾರೆಡ್ಡಿ.. ಸರ್ಕಾರ ಉಳಿಸುವ ಪ್ರಯತ್ನ ಠುಸ್​?

ಮಾಜಿ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಕಾಂಗ್ರೆಸ್​ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಅತೃಪ್ತರ ಗುಂಪಿನಲ್ಲಿದ್ದು, ತಾವು ರಾಜೀನಾಮೆ ಸಲ್ಲಿಸುತ್ತಿರುವುದು ಪಕ್ಕಾ ಎಂದು ಹೇಳಿದ್ದಾರೆ. 

ಸ್ಪೀಕರ್​ ಕಚೇರಿಯ ಎದುರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹೌದು ಅತೃಪ್ತರ ಗುಂಪಿನಲ್ಲಿ ನಾನಿದ್ದೇನೆ. ರಾಜೀನಾಮೆ ನೀಡಲೆಂದೇ ನಾನು ಹೋಗುತ್ತಿದ್ದೇನೆ. ಮಿಕ್ಕವರ ವಿಷಯ ಗೊತ್ತಿಲ್ಲ ನಾನಂತೂ ರಾಜೀನಾಮೆ ನೀಡುತ್ತಿರುವುದು ಪಕ್ಕಾ ಎಂದಿದ್ದಾರೆ. 

ಸಿದ್ದರಾಮಯ್ಯ ಆಪ್ತರ ಬಣದಲ್ಲಿ ಗುರುತಿಸಿಕೊಂಡಿರುವ ರಾಮಲಿಂಗಾರೆಡ್ಡಿ ನಡೆಯು ಅಚ್ಚರಿ ಮೂಡಿಸಿದೆ. 

2019-07-06 13:47:15

ಕನ್ನಿಂಗ್​ ಹ್ಯಾಂ ರಸ್ತೆಯಲ್ಲಿ ಕೈ ನಾಯಕರು? ಸರ್ಕಾರ ಉಳಿಸಲು ಸಭೆ ಮೇಲೆ ಸಭೆ

ಬೆಂಗಳೂರು:ಮೈತ್ರಿ ಸರ್ಕಾರದ ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಕೈ ನಾಯಕರು ಕನ್ನಿಂಗ್​ ಹ್ಯಾಂ ರಸ್ತೆಯಲ್ಲಿ ಸಭೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಸದ್ಯ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ವಿದೇಶದಲ್ಲಿದ್ದು 

2019-07-06 13:31:41

ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಾಗಿದೆ

ಬೆಂಗಳೂರು:ಮೈತ್ರಿ ಸರ್ಕಾರದಲ್ಲಿ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 

2019-07-06 13:28:07

ಸ್ಪೀಕರ್​ ಕಚೇರಿಯಲ್ಲಿ ಶಾಸಕರು, ಆಸ್ಪತ್ರೆಯಲ್ಲಿ ರಮೇಶ್,​ ಶಾಸಕರ ಮುಂದಿನ ಕಾನೂನಾತ್ಮಕ ನಡೆ ಏನು?

ಬೆಂಗಳೂರು:ಸದ್ಯ ಮೈತ್ರಿ ಸರ್ಕಾರದ ಎಂಟು ಶಾಸಕರು ಸ್ಪೀಕರ್​ ಕಚೇರಿಯಲ್ಲಿದ್ದಾರೆ. ಆದರೆ, ಸ್ಪೀಕರ್​ ರಮೇಶ್​ ಕುಮಾರ್ ಮಾತ್ರ ಅವರ ಕೈಗೆ ಸಿಗುತ್ತಿಲ್ಲ. ಹಾಗಿದ್ರೆ ಶಾಸಕರ ಮುಂದಿನ ಕಾನೂನಾತ್ಮಕ ನಡೆ ಏನು? ಇಲ್ಲಿದೆ ಡೀಟೇಲ್ಸ್​. 

ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಶಾಸಕರು ರಾಜೀನಾಮೆ ನೀಡಬೇಕಿದ್ದರೆ ಅದು ಸ್ಪೀಕರ್​ ಮೂಲಕ ಮಾತ್ರ ಸಾಧ್ಯ. ಅವರು ಸಿಗದೆ ಇದ್ದರೆ ಸ್ಪೀಕರ್​ ಕಚೇರಿಯ ಸಿಬ್ಬಂದಿ ಮೂಲಕ ತಲುಪಿಸುವ ಅವಕಾಶವೂ ಇದೆ. 

ಒಂದು ವೇಳೆ ರಾಜೀನಾಮೆಯನ್ನು ಫ್ಯಾಕ್ಸ್​ ಮಾಡುವುದಾದರೆ ಅಷ್ಟರೊಳಗಾಗಿ ಪಕ್ಷವು ಅವರನ್ನು ಉಚ್ಚಾಟನೆ ಮಾಡಬಹುದು. ಖುದ್ದು ಹಾಜರಿಗಾಗಿ ಎಲ್ಲ ಶಾಸಕರು ಒಟ್ಟಾಗಿ ಸ್ಪೀಕರ್​ ಕಚೇರಿಯಲ್ಲಿರುವುದರಿಂದ ಈಗ ಸಿಬ್ಬಂದಿ ಮೂಲಕ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಬಹುದು. 

ಈ ವಿಚಾರದಲ್ಲಿ ಸ್ಪೀಕರ್​ ಸಾರ್ವಭೌಮ ಅಧಿಕಾರ ಹೊಂದಿದ್ದು, ಸುಪ್ರೀಂಕೋರ್ಟ್​ ಸಹ ಮಧ್ಯ ಪ್ರವೇಶ ಮಾಡುವಹಾಗಿಲ್ಲ. 

2019-07-06 13:25:02

ಸ್ಪೀಕರ್​ ಕಚೇರಿಯಲ್ಲಿ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಳ

  • ಸ್ಪೀಕರ್​ ಕಚೇರಿಯಲ್ಲಿ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಳ ಹೆಚ್ಚಾಗಿದೆ. 11 ಶಾಸಕರು ರಾಜೀನಾಮೆ ನೀಡಲು ಮುಂದೆ ಬಂದಿದ್ದಾರೆ ಎನ್ನಲಾಗುತ್ತಿದೆ. 

2019-07-06 13:20:34

ಶಾಸಕರ ರಾಜೀನಾಮೆ ಪ್ರಹಸನ: ಕನಕಪುರದಿಂದ ಬೆಂಗಳೂರಿನತ್ತ ಡಿಕೆಶಿ

ಸಚಿವ ಡಿಕೆ ಶಿವಕುಮಾರ್​

ಬೆಂಗಳೂರು:ಮೈತ್ರಿ ಸರ್ಕಾರ ಉರುಳುವ ಭೀತಿ ಎದುರಾಗಿದ್ದು, ಎಂಟು ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಸಚಿವ ಡಿಕೆ ಶಿವಕುಮಾರ್​ ಅಖಾಡಕ್ಕಿಳಿಯುತ್ತಿದ್ದಾರೆ. 

ಕನಕಪುರದಲ್ಲಿ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡಿದ್ದ ಡಿಕೆಶಿ ಸಭೆ ಮೊಟಕುಗೊಳಿಸಿ. ವಾಪಸ್​ ಬೆಂಗಳೂರಿಗೆ ಮರಳುತ್ತಿದ್ದಾರೆ ಎನ್ನಲಾಗಿದೆ. 

2019-07-06 13:12:15

ಶಾಸಕರ ರಾಜೀನಾಮೆ ಜಂಜಾಟ: ಜಯದೇವಾ ಆಸ್ಪತ್ರೆಗೆ ಸ್ಪೀಕರ್​ ದಾಖಲು

ಸ್ಪೀಕರ್ ರಮೇಶ್​ ಕುಮಾರ್​

ಬೆಂಗಳೂರು:ಮೈತ್ರಿ ಸರ್ಕಾರದ ಎಂಟು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದು ಯಾರ ಕೈಗೂ ಸಿಗದ ಸ್ಪೀಕರ್​ ಸದ್ಯ ಜಯದೇವ ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ. 

ಶಾಸಕರು ರಾಜೀನಾಮೆ ನೀಡಲು ಮುಂದಾದಾಗ ಯಾರ ಕೈಗೂ ಸಿಗದಿದ್ದ ಸ್ಪೀಕರ್​ ಸೀದಾ ಜಯದೇವಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. 

2019-07-06 13:07:05

ಹದಿಮೂರು ಜನ ರಾಜೀನಾಮೆ ನೀಡಿದ್ರೆ ಏನಾಗುತ್ತೆ? ಇಲ್ಲಿದೆ ಬಲಾಬಲದ ಲೆಕ್ಕ

ಬೆಂಗಳೂರು: ಸದ್ಯ ಮೈತ್ರಿ ಸರ್ಕಾರದ ಎಂಟು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಇನ್ನೂ ಐದು ಜನ ರಾಜೀನಾಮೆಗೆ ಸಿದ್ದರಾಗಿದ್ದಾರೆ ಎನ್ನಲಾಗುತ್ತಿದೆ. 

8+5 ಸಾಸಕರು ರಾಜೀನಾಮೆ ನೀಡಿದರೆ ಒಟ್ಟು 13 ಮಂದಿ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್​ ಪಡೆದಂತಾಗುತ್ತದೆ. ಆಗ ಸರ್ಕಾರ ಅನಿವಾರ್ಯವಾಗಿ ಉರುಳುತ್ತದೆ. ಮೈತ್ರಿಯ ಬಲಾಬಲ ಹೀಗಿದೆ ನೋಡಿ.

ಸದನದ ಒಟ್ಟು ಬಲ: 224

  • ಬಿಜೆಪಿ: 105
  • ಕಾಂಗ್ರೆಸ್: 79
  • ಜೆಡಿಎಸ್ 38
  • ಪಕ್ಷೇತರ: 2

ಒಟ್ಟು ರಾಜೀನಾಮೆ ಸಂಖ್ಯೆ: 14

  • ಬಿಜೆಪಿ: 105
  • ಕಾಂಗ್ರೆಸ್: 79-12= 67
  • ಜೆಡಿಎಸ್: 38-2=36
  • ಪಕ್ಷೇತರರು: 2
  • ರಾಜೀನಾಮೆ ಬಳಿಕ ಸದನದ ಬಲ: 210
  • ಬಹುಮತ ಸಾಬೀತಿಗೆ ಮ್ಯಾಜಿಕ್ ನಂಬರ್: 106

ಹಾಗಾಗಿ ಸರ್ಕಾರ ರಚಿಸಲು ಬಿಜಪಿಗೆ 1 ಶಾಸಕರ ಕೊರತೆ ಎದುರಾಗಲಿದೆ. ಪಕ್ಷೇತರ ಶಾಸಕ ಅಥವಾ BSP ಶಾಸಕರೊಬ್ಬರು ಬೆಂಬಲ ಕೊಟ್ಟರೆ ಬಿಜೆಪಿ ಸುಲಭವಾಗಿ ಸರ್ಕಾರ ರಚಿಸುವ ಸಾಧ್ಯತೆ ಇದೆ. 

2019-07-06 13:05:35

ಹೆಚ್ ಡಿ ಕೆ ಅಮೆರಿಕದೊಂದಿಗೆ ಬರುವ ಹೊತ್ತಿಗೆ ಸರ್ಕಾರ ಪತನ?

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಮೆರಿಕಕ್ಕೆ ತೆರಳಿದ್ದು ಅವರು ಬರುವ ಹೊತ್ತಿಗೆ ಮೈತ್ರಿ ಸರ್ಕಾರ ಉರುಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಸರ್ಕಾರ ಉರುಳಬೇಕಾದರೆ ಹದಿಮೂರು ಜನರು ರಾಜೀನಾಮೆ ನೀಡಬೇಕಿದೆ. ಸದ್ಯ ಎಂಟು ಜನರು ರಾಜೀನಾಮೆ ನೀಡಲು ಮುಂದಾಗಿದ್ದಾರೆನ್ನುವ ವಿಷಯ ಮೈತ್ರಿ ಸರ್ಕಾರದ ಮಟ್ಟಿಗೆ ಗಂಭೀರ ಹೌದು. 

ಮಿಕ್ಕ ಐದು ಜನರು ರಾಜೀನಾಮೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಹಾಗೊಮ್ಮೆ ಆದರೆ, ಸಿಎಂ ವಾಪ್​ ಬರುವ ವೇಳೆಗೆ ಸರ್ಕಾರ ಪತನವಾಗಿರಲಿದೆ. 

2019-07-06 13:05:07

ಮೈತ್ರಿ ಸರ್ಕಾರ ಪತನ ಭೀತಿ: ಸಿದ್ದರಾಮಯ್ಯ ಗೌಪ್ಯ ಸಭೆ

ಬೆಂಗಳೂರು:ಕಾಂಗ್ರೆಸ್​- ಜೆಡಿಎಸ್​ ಮೈತ್ರಿ ಸರ್ಕಾರದ 8 ಮಂದಿ ಶಾಸಕರು ಸ್ಪೀಕರ್​ ಕಚೇರಿಗೆ ತೆರಳಿರುವ ಹಿನ್ನೆಲೆಯಲ್ಲಿ ಸರ್ಕಾರ ಉರುಳುವ ಭೀತಿ ಕಾಡುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೌಪ್ಯ ಸಭೆ ನಡೆಸಿದ್ದಾರೆ. 

ಅತೃಪ್ತ ಶಾಸಕರು ರಾಜೀನಾಮೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಅತೃಪ್ತರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಶಾಸಕರೊಟ್ಟಿಗೆ ಅವರು ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. 

2019-07-06 12:46:56

11 ಶಾಸಕರ ರಾಜೀನಾಮೆ ಖಚಿತ: ಸ್ಪೀಕರ್​​ ಅವರಿಂದಲೇ ಸ್ಪಷ್ಟನೆ

ರಾಜೀನಾಮೆಗೆ ಮುಂದಾದ 8 ಶಾಸಕರು

ಬೆಂಗಳೂರು:ದೀಢೀರ್​ ​ರಾಜಕೀಯ ಬೆಳಗವಣಿಗೆಯಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ ಪಕ್ಷದ ಎಂಟು ಮಂದಿ ಶಾಸಕರು ರಾಜೀನಾಮೆ ನೀಡಲು ಸ್ವೀಕರ್​ ಕಚೇರಿ ಭೇಟಿ ನೀಡಿದ್ದಾರೆ.

ಶಾಸಕರಾದ ಎಚ್​.ವಿಶ್ವನಾಥ್​, ಬಿ.ಸಿ.ಪಾಟೀಲ್​, ಶಿವರಾಮ್​ ಗೌಡ, ನಾರಾಯಣಗೌಡ , ಪ್ರತಾಪ್​ ಗೌಡ ಪಾಟೀಲ್​, ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಠಹಳ್ಳಿ ಹಾಗೂ ಗೋಪಾಲಯ್ಯ ಇವರು ಇಂದು ವಿಧಾನಸೌಧದ ಸ್ವೀಕರ್​ ಕಚೇರಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ಪೀಕರ್​ಗಾಗಿ ಕಾಯುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ.

ಈ ಎಲ್ಲಾ ಶಾಸಕರು ರಾಜೀನಾಮೆ ನೀಡಲು ತೆರಳಿದಾಗ ಕಚೇರಿಯಲ್ಲಿದ್ದ ಸ್ವೀಕರ್​ ರಮೇಶ್​ ಕುಮಾರ್​, ಕಚೇರಿಯಿಂದ ಹೊರ ಹೋಗಿದ್ದಾರೆ. ಸ್ವೀಕರ್​ ಕೈಗೆ ರಾಜೀನಾಮೆ ಪತ್ರ ನೀಡಲು ಕಾದಿದ್ದಾರೆ ಎನ್ನಲಾಗಿದೆ.

Last Updated : Jul 6, 2019, 7:18 PM IST

ABOUT THE AUTHOR

...view details