ಬೆಂಗಳೂರು: ನಗರದಲ್ಲಿ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಪಾಲಿಕೆಯ ಎಂಟು ವಲಯಗಳಿಗೆ ಐಎಎಸ್ ಅಧಿಕಾರಿಗಳನ್ನು ಸಂಯೋಜಕರಾಗಿ ನೇಮಿಸಿ ಆದೇಶ ಹೊರಡಿಸಿದೆ.
ಕೊರೊನಾ ನಿಯಂತ್ರಣಕ್ಕೆ 8 ಐಎಎಸ್ ಅಧಿಕಾರಿಗಳ ನೇಮಿಸಿದ ಸರ್ಕಾರ ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುವ ನಿರ್ವಹಣಾ ಕ್ರಮಗಳ ಮೇಲ್ವಿಚಾರಣೆ, ಪರಿಶೀಲನೆ ಮತ್ತು ತಕ್ಷಣ ನಿರ್ಧಾರ ಕೈಗೊಳ್ಳಲು ಅನುವಾಗುವ ನಿಟ್ಟಿನಲ್ಲಿ ಈ ಸಂಯೋಜಕರು ಕಾರ್ಯನಿರ್ವಹಿಸಲಿದ್ದಾರೆ. ಈ ಎಂಟು ವಲಯ ಸಂಯೋಜಕರು ಬಿಬಿಎಂಪಿ ಆಯುಕ್ತರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ವಲಯವಾರು ಜವಾಬ್ದಾರಿ...
ಬೆಂಗಳೂರು ಪೂರ್ವ ವಲಯದ ಅಧಿಕಾರಿಯಾಗಿ ತುಷಾರ್ ಗಿರಿನಾಥ್, ಬೆಂಗಳೂರು ಪಶ್ಚಿಮ ವಲಯದ ಅಧಿಕಾರಿಯಾಗಿ ರಾಜೇಂದ್ರ ಕುಮಾರ್, ಬೊಮ್ಮನಹಳ್ಳಿ ವಲಯದ ಅಧಿಕಾರಿಯಾಗಿ ಕ್ಯಾ. ಪಿ.ಮಣಿವಣ್ಣನ್, ಯಲಹಂಕ ವಲಯದ ಅಧಿಕಾರಿಯಾಗಿ ನವೀನ್ ರಾಜ್ ಸಿಂಗ್, ಬೆಂಗಳೂರು ದಕ್ಷಿಣ ವಲಯದ ಅಧಿಕಾರಿಯಾಗಿ ಮುನಿಷ್ ಮೌದ್ಗಿಲ್, ಮಹದೇವಪುರ ವಲಯದ ಅಧಿಕಾರಿಯಾಗಿ ಡಾ. ಎನ್.ಮಂಜುಳಾ, ದಾಸರಹಳ್ಳಿ ವಲಯದ ಅಧಿಕಾರಿಯಾಗಿ ಡಾ. ಪಿ.ಸಿ.ಜಾಫರ್, ರಾಜರಾಜೇಶ್ವರಿ ನಗರ ವಲಯದ ಅಧಿಕಾರಿಯಾಗಿ ಡಾ. ಆರ್.ವಿಶಾಲ್ ನೇಮಕ ಆಗಿದ್ದಾರೆ.