ಕರ್ನಾಟಕ

karnataka

ETV Bharat / state

ಉದ್ಯಾನದಲ್ಲಿ ಎಂಟು ಕಾಗೆಗಳ ಸಾವು: ಹಕ್ಕಿ ಜ್ವರ ಭೀತಿ.. ಆತಂಕ - crows died in bangalore

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ಆಂಜನೇಯಸ್ವಾಮಿ ಪಾರ್ಕ್​ನಲ್ಲಿ ಎರಡೇ ದಿನದಲ್ಲಿ ಎಂಟು ಕಾಗೆಗಳು ಮೃತಪಟ್ಟಿದ್ದು, ಹಕ್ಕಿ ಜ್ವರದ ಭೀತಿ ಸ್ಥಳೀಯರಿಲ್ಲಿ ಉಂಟಾಗಿದೆ. ಸತ್ತ ಕಾಗೆಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪಶುಸಂಗೋಪನಾ ಅಧಿಕಾರಿಗಳು ತಿಳಿಸಿದ್ದಾರೆ.

8 crows died in bangalore mahalakshmi layout  park
ಒಂದೇ ಕಡೆ ಏಂಟು ಕಾಗೆಗಳ ಸಾವು

By

Published : Mar 17, 2020, 8:59 PM IST

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್​ನಲ್ಲಿ ಆಂಜನೇಯಸ್ವಾಮಿ ಉದ್ಯಾನದಲ್ಲಿ ನಿನ್ನೆ (ಮಾ.16) 6 ಕಾಗೆಗಳು ಇಂದು (ಮಾ.17) 2 ಕಾಗೆಗಳು ಸಾವನಪ್ಪಿದ್ದು, ಹಕ್ಕಿ ಜ್ವರದ ಭೀತಿ ಮೂಡಿಸಿದೆ.

ಒಂದೇ ಕಡೆ ಏಂಟು ಕಾಗೆಗಳ ಸಾವು

ತಕ್ಷಣ ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅಲ್ಲಿಯೇ ಬೇರೆ, ಬೇರೆ ಪಕ್ಷಿಗಳು ವಾಸಿಸುತ್ತವೆ. ಆದರೆ, ಕಾಗೆಗಳು ಮಾತ್ರ ಸಾವನಪ್ಪಿರುವುದರಿಂದ ವಿಷಪೂರಿತ ಆಹಾರ ಸೇವನೆ ಮಾಡಿರುವ ಅನುಮಾನವಿದೆ. ಅದಕ್ಕಾಗಿ ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸ್ಥಳೀಯರಾದ ಕೇಶವಮೂರ್ತಿ ತಿಳಿಸಿದರು.

ಪ್ರಯೋಗಾಲಯದ ವರದಿ ಬಂದ ಮೇಲೆ ಸಂಪೂರ್ಣ ಮಾಹಿತಿ ತಿಳಿಯಲಿದ್ದು, ಅಗತ್ಯ ಕ್ರಮಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details