ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 7,576 ಹೊಸ ಪಾಸಿಟಿವ್ ಕೇಸ್ ದೃಢ; 97 ಬಲಿ - ಗಂಟಲುದ್ರವ ಪರೀಕ್ಷೆ

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 97 ಜನರು ಕೊರೊನಾಗೆ ಮೃತಪಟ್ಟ ವರದಿಯಾಗಿದೆ. ಇಂದು ಒಂದೇ ದಿನ 7,576 ಮಂದಿಗೆ ಕೊರೊನಾ ದೃಢಪಟ್ಟಿದೆ.

7576  new covid-19 cases found in Bangaluru
ಸಂಗ್ರಹ ಚಿತ್ರ

By

Published : Sep 15, 2020, 11:35 PM IST

ಬೆಂಗಳೂರು : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇದೀಗ 4,75,265ಕ್ಕೆ ಏರಿದ್ದು, ಒಂದೇ ದಿನ 7,576 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರ ಮಧ್ಯೆ 7,406 ಗುಣಮುಖರಾಗಿದ್ದು 3,69,229 ಮಂದಿ ಈವರೆಗೆ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ.‌

ಕಳೆದ 24 ಗಂಟೆಯಲ್ಲಿ 97 ಜನರು ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 7,481 ಆಗಿದೆ. 19 ಜನರು ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ.‌ ರಾಜ್ಯದಲ್ಲಿ ಸದ್ಯ 98,536 ಸಕ್ರಿಯ ಪ್ರಕರಣಗಳಿದ್ದು, 794 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

ಇಂದು ವಿಮಾನ ನಿಲ್ದಾಣದಿಂದ 1,313 ಪ್ರಯಾಣಿಕರು ಬಂದಿದ್ದು, ಕೋವಿಡ್ ತಪಾಸಣೆಗೊಳಗಾಗಿದ್ದಾರೆ. ಸೋಂಕಿತರ ಸಂಪರ್ಕದಲ್ಲಿ ಕಳೆದ 14 ದಿನಗಳಲ್ಲಿ 6,00,155 ಪ್ರಾಥಮಿಕ, 5,44,719 ದ್ವಿತೀಯ ಸಂಪರ್ಕದಲ್ಲಿದ್ದಾರೆ. ಹೋಂ ಕ್ವಾರೆಂಟೈನ್​ನಲ್ಲಿ 4,88,013 ಜನರಿದ್ದಾರೆ. ಈವರೆಗೆ 39,15,302 ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ.

ABOUT THE AUTHOR

...view details