ಬೆಂಗಳೂರು:ರಾಜ್ಯದಲ್ಲಿಂದು 755 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,21,128ಕ್ಕೆ ಏರಿಕೆಯಾಗಿದೆ.
ಇಂದು ಕೋವಿಡ್ಗೆ 3 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,099ಕ್ಕೆ ಏರಿಕೆಯಾಗಿದೆ. ಇತರೆ ಕಾರಣದಿಂದ 19 ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು ಸುಮಾರು 976 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 8,98,176 ಮಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 186 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 1,0834 ಸಕ್ರಿಯ ಪ್ರಕರಣಗಳಿವೆ.
ಓದಿ: ರಾಜಕೀಯಕ್ಕೆ ನಾನು ಸೂಟ್ ಆಗುವುದಿಲ್ಲ : ಪ್ರಮೋದಾ ದೇವಿ ಒಡೆಯರ್
ಕಳೆದ 7 ದಿನಗಳಲ್ಲಿ 18,304 ಮಂದಿ ಹೋಂ ಕ್ವಾರಂಟೈನ್ ಇದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 64,160 ಜನರಿದ್ದಾರೆ. ದ್ವಿತೀಯ ಸಂಪರ್ಕದಲ್ಲಿ 73,508 ಜನರಿದ್ದಾರೆ. ವಿಮಾನ ನಿಲ್ದಾಣದಿಂದ 1,768 ಪ್ರಯಾಣಿಕರು ಬಂದಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.
ಇನ್ನು ಯುಕೆಯಿಂದ ಬಂದಿದ್ದ 67 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಇವರಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನೂ 66 ಜನರ ವರದಿ ಬರಬೇಕಿದೆ. ಈವರೆಗೆ 2,173 ಪರೀಕ್ಷೆ ನಡೆಸಿದ್ದು, 34 ಪಾಸಿಟಿವ್ ಕೇಸ್ ದೃಢವಾಗಿವೆ. 2,056 ಮಂದಿಗೆ ನೆಗೆಟಿವ್ ಬಂದಿದ್ದು, 83 ಜನರ ವರದಿ ಬರಬೇಕಿದೆ.