ಬೆಂಗಳೂರು:ರಾಜ್ಯದಲ್ಲಿಂದು 7,542 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 7,51,390ಕ್ಕೆ ಏರಿಕೆ ಆಗಿದೆ.
ಇನ್ನು 8,580 ಸೋಂಕಿತರು ಗುಣಮುಖರಾಗಿದ್ದು, 6,28,588 ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಕೊರೊನಾಗೆ 73 ಸೋಂಕಿತರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 10,356ಕ್ಕೆ ಏರಿಕೆ ಆಗಿದೆ. 19 ಮಂದಿ ಅನ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ. ಇನ್ನು ರಾಜ್ಯದಲ್ಲಿ ಒಟ್ಟು1,12,427 ಸಕ್ರಿಯ ಪ್ರಕರಣಗಳು ಇದ್ದು 946 ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ.
ಕಳೆದ 14 ದಿನಗಳಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕವಾಗಿ 5,76,167, ದ್ವಿತೀಯ ಸಂಪರ್ಕಿತರಲ್ಲಿ 5,22,343 ಮಂದಿ ಇದ್ದಾರೆ. 7 ದಿನಗಳಲ್ಲಿ 1,20,058 ಜನ ಹೋಂ ಕ್ವಾರೆಂಟೈನ್ನಲ್ಲಿ ಇದ್ದಾರೆ.
ಇಂದು 1,05,891 ಜನರಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದು ಅದರಲ್ಲಿ 7,542 ಸೋಂಕು ದೃಢವಾಗಿದೆ. ಇಂದು ವಿಮಾನ ನಿಲ್ದಾಣದಿಂದ 922 ಪ್ರಯಾಣಿಕರು ಬಂದಿದ್ದು ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಕಳೆದ 24 ಗಂಟೆಯಲ್ಲಿ ಕೋವಿಡ್ ಸೋಂಕಿನ ಖಚಿತ ಪ್ರಕರಣಗಳು ಶೇಕಡವಾರು ಪ್ರಮಾಣ 7.12% ಇದ್ದು, ಮೃತಪಟ್ಟವರ ಶೇಕಡವಾರು ಪ್ರಮಾಣ 0.96% ನಷ್ಟು ಇದೆ.
ಬೆಂಗಳೂರು ಕೊರೊನಾ ವರದಿ:
ನಗರದಲ್ಲಿ ಇಂದು 3441 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಸೋಂಕಿತರ ಒಟ್ಟು ಸಂಖ್ಯೆ 3,00,634 ಕ್ಕೆ ಏರಿಕೆಯಾಗಿದೆ. ಇಂದು 3021 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 231483 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳು ಒಟ್ಟು 65664 ಕ್ಕೆ ಏರಿಕೆಯಾಗಿದೆ. ಇಂದು 24 ಮಂದಿ ಕೊರೊನಾ ಸೋಂಕಿತರು ಬಲಿಯಾಗಿದ್ದು, ಈವರೆಗೆ 3486 ಮಂದಿ ಮೃತಪಟ್ಟಿದ್ದಾರೆ. ಒಟ್ಟು 359 ಮಂದಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.