ಬೆಂಗಳೂರು:ರಾಜ್ಯದಲ್ಲಿ ಇಂದು ಕೊರೊನಾ ಸೋಂಕು 573 ಮಂದಿಗೆ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,36,051ಕ್ಕೆ ಏರಿಕೆ ಆಗಿದೆ. ನಾಲ್ವರು ಕೋವಿಡ್ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 12,197ಕ್ಕೆ ತಲುಪಿದೆ.
ರಾಜ್ಯದಲ್ಲಿಂದು 573 ಮಂದಿಗೆ ಕೋವಿಡ್ ದೃಢ: 4 ಸೋಂಕಿತರು ಬಲಿ - ಕರ್ನಾಟಕ ಕೊರೊನಾ ಪ್ರಕರಣ
ರಾಜ್ಯದಲ್ಲಿ ಇಂದು ನಾಲ್ವರು ಕೋವಿಡ್ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 12,197ಕ್ಕೆ ಏರಿಕೆಯಾಗಿದೆ. ಹೊಸದಾಗಿ 573 ಮಂದಿಗೆ ಸೋಂಕು ದೃಢಪಟ್ಟಿದೆ.
![ರಾಜ್ಯದಲ್ಲಿಂದು 573 ಮಂದಿಗೆ ಕೋವಿಡ್ ದೃಢ: 4 ಸೋಂಕಿತರು ಬಲಿ 753-people-tested-corona-positive-in-karnataka](https://etvbharatimages.akamaized.net/etvbharat/prod-images/768-512-10366004-thumbnail-3x2-news.jpg)
19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 401 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 9,16,325 ಮಂದಿ ಬಿಡುಗಡೆಯಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 155 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ 7,510 ಸಕ್ರಿಯ ಪ್ರಕರಣಗಳಿವೆ. ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 0.70% ಇದ್ದರೆ, ಮೃತಪಟ್ಟವರ ಶೇಕಡಾವಾರು ಪ್ರಮಾಣ 0.69ರಷ್ಟಿದೆ.
ಬೆಂಗಳೂರಿನಲ್ಲಿಂದು 306 ಮಂದಿಗೆ ಸೋಂಕು ದೃಢಪಟ್ಟಿದ್ದು, 3,97,133ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. 163 ಮಂದಿ ಬಿಡುಗಡೆಯಾಗಿದ್ದಾರೆ. ಈವರೆಗೆ 3,87,763 ಗುಣಮುಖರಾಗಿದ್ದಾರೆ. ಇಬ್ಬರು ಮೃತರಾಗಿದ್ದು, ಸಾವಿನ ಸಂಖ್ಯೆ 4378ಕ್ಕೆ ಏರಿಕೆ ಆಗಿದೆ. ಸದ್ಯ 4,991 ಸಕ್ರಿಯ ಪ್ರಕರಣಗಳು ಇವೆ.