ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 75 ಹೊಸ ಕೋವಿಡ್ ಪ್ರಕರಣಗಳು ಪತ್ತೆ: ಸೋಂಕಿತರ ಸಂಖ್ಯೆ 2493ಕ್ಕೆ ಏರಿಕೆ! - 75 corona case

ರಾಜ್ಯದಲ್ಲಿ ಇಂದು 75 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2493ಕ್ಕೆ ಏರಿಕೆಯಾಗಿದೆ. 28 ಜನ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇಲ್ಲಿಯವರೆಗೆ 809 ಮಂದಿ ಗುಣಮುಖರಾಗಿದ್ದಾರೆ. 1635 ಸಕ್ರಿಯ ಪ್ರಕರಣಗಳಿದ್ದು, 47 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

75 new Covid cases in state
ರಾಜ್ಯದಲ್ಲಿಂದು 75 ಹೊಸ ಕೋವಿಡ್ ಪ್ರಕರಣಗಳು: ಸೋಂಕಿತರ ಸಂಖ್ಯೆ 2493ಕ್ಕೆ ಏರಿಕೆ!

By

Published : May 28, 2020, 1:27 PM IST

ಬೆಂಗಳೂರು:ರಾಜ್ಯದಲ್ಲಿ ಇಂದು 75 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2493ಕ್ಕೆ ಏರಿಕೆಯಾಗಿದೆ.

28 ಜನ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇಲ್ಲಿಯವರೆಗೆ 809 ಜನ ಗುಣಮುಖರಾಗಿದ್ದಾರೆ. 1635 ಸಕ್ರಿಯ ಪ್ರಕರಣಗಳಿದ್ದು, 47 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ 7, ವಿಜಯಪುರದಲ್ಲಿ 1, ಕಲಬುರಗಿಯಲ್ಲಿ 3, ರಾಯಚೂರಿನಲ್ಲಿ 1, ದಕ್ಷಿಣ ಕನ್ನಡದಲ್ಲಿ 6, ಉಡುಪಿಯಲ್ಲಿ 27, ಹಾಸನದಲ್ಲಿ 13, ಚಿಕ್ಕಮಗಳೂರಿನಲ್ಲಿ 3, ಚಿತ್ರದುರ್ಗದಲ್ಲಿ 6, ಯಾದಗಿರಿಯಲ್ಲಿ 7 ಪ್ರಕರಣ ಸೇರಿ ಒಟ್ಟು 75 ಸೋಂಕಿತ ಪ್ರಕರಣಗಳು ಇಂದು ಪತ್ತೆಯಾಗಿವೆ.

75 ಹೊಸ ಕೋವಿಡ್ ಪ್ರಕರಣಗಳು

ಉಡುಪಿ, ದಕ್ಷಿಣ ಕನ್ನಡ, ಯಾದಗಿರಿಯಲ್ಲಿ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಹೆಚ್ಚಿನವರು ಮುಂಬೈನಿಂದ ಹಿಂದಿರುಗಿದವರಾಗಿದ್ದಾರೆ. ಹಾಸನದಲ್ಲಿ 13 ಜನರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಇದರಲ್ಲಿ ಎಂಟು ಜನರಿಗೆ ಯಾರ ಸಂಪರ್ಕದಿಂದ ಸೋಂಕು ಬಂದಿದೆ ಎಂಬ ಮಾಹಿತಿಯೇ ಇಲ್ಲ. ಇದು ಸಮುದಾಯ ಮಟ್ಟಕ್ಕೆ ಹರಡಿದೆಯಾ ಎಂಬ ಆತಂಕವನ್ನು ಸೃಷ್ಟಿಸಿದೆ.

ಮಂಗಮ್ಮನಪಾಳ್ಯದಲ್ಲಿ ಕೊರೊನಾ: ಬೆಂಗಳೂರು ನಗರದಲ್ಲಿ ಏಳು ಜನರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ದುಬೈನಿಂದ ಬಂದ 26 ವರ್ಷದ p-2419 ವ್ಯಕ್ತಿಗೆ ಸೋಂಕು ತಗುಲಿದೆ. ಉಳಿದಂತೆ ಮಂಗಮ್ಮನಪಾಳ್ಯ ಮದೀನಾ ನಗರದ 1240 ಸಂಖ್ಯೆಯ ಪೇಶಂಟ್ ಸಂಪರ್ಕದಿಂದ 38 ವರ್ಷದ ಯುವಕ P-2486, 13 ವರ್ಷದ ಬಾಲಕಿ P-2487, 15 ವರ್ಷದ ಬಾಲಕಿ P-2488, 35 ವರ್ಷದ ಮಹಿಳೆ P-2489, 4 ವರ್ಷದ ಗಂಡುಮಗು P-2490, 11 ವರ್ಷದ ಬಾಲಕಿ P-2491ಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ABOUT THE AUTHOR

...view details