ಬೆಂಗಳೂರು: ನಾಲ್ಕು ದಿನಗಳ ಹಿಂದೆ ಕಿಡಿಗೇಡಿಗಳು ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಪೊಲೀಸ್ ವಾಹನಗಳನ್ನು ಸುಟ್ಟಿದ್ದರೂ ಪೊಲೀಸರು ಮಾತ್ರ ಆತ್ಮಸ್ಥೈರ್ಯ ಕಳೆದುಕೊಳ್ಳದೆ ದೇಶಭಕ್ತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ.
ಠಾಣೆಗೆ ಹಾನಿಯಾದ್ರೂ ದೇಶಪ್ರೇಮ ಮೆರೆದ ಡಿ.ಜೆ.ಹಳ್ಳಿ ಪೊಲೀಸರು - 74th Independence Day at DG Halli Police Station
ಬೆಂಗಳೂರಿನಲ್ಲಿ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಹಾನಿಗೊಳಗಾದರೂ ಪೊಲೀಸರು 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಡಿ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ
ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಅಂಗಳದಲ್ಲಿ ಸ್ವಚ್ಛತಾ ಕಾರ್ಯ ಮಾಡಿದ ನಂತರ ಪೊಲೀಸರು ಹಾನಿಯಾಗಿದ್ದ ಧ್ವಜಸ್ಥಂಭವನ್ನ ಸ್ವಚ್ಛ ಮಾಡಿದ್ದರು.
ಠಾಣೆ ಮುಂದೆ ರಂಗೋಲಿ ಹಾಕಿ ಸಿಂಗಾರ ಮಾಡಲಾಗಿತ್ತು. ನಗರ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಿಬ್ಬಂದಿ ಉದ್ದೇಶಿಸಿ ಮಾತನಾಡಿ, ನಾವೆಲ್ಲ ಯೂನಿಫಾರ್ಮ್ ಧರಿಸಲು ಅದೃಷ್ಠ ಮಾಡಿದ್ದೇವೆ. ಬೆಂಗಳೂರು ಪೊಲೀಸರಾಗಿ ಕೆಲಸ ಮಾಡುವವರು ಅದೃಷ್ಟವಂತರು ಮಾತ್ರ. ಕಳೆದ ನಾಲ್ಕೈದು ದಿನದ ಬಂದೋಬಸ್ತ್ ಫಲವಾಗಿ ಪರಿಸ್ಥಿತಿ ನಿಯಂತ್ರಣ ಮಾಡಲು ಸಾಧ್ಯವಾಯಿತು ಎಂದರು.
Last Updated : Aug 15, 2020, 2:42 PM IST