ಬೆಂಗಳೂರು :ರಾಜ್ಯದಲ್ಲಿಂದು 1,68,712 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 7345 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 27,84,355ಕ್ಕೆ ಏರಿಕೆ ಕಂಡಿದೆ. ಇನ್ನು, ಪಾಸಿಟಿವಿಟಿ ದರ 4.35% ಕ್ಕೆ ಏರಿದೆ.
ರಾಜ್ಯದಲ್ಲಿ 7345 ಮಂದಿಗೆ ಸೋಂಕು ದೃಢ : 148 ಸೋಂಕಿತರು ಕೊರೊನಾಗೆ ಬಲಿ - ಕರ್ನಾಟಕದಲ್ಲಿ ಇಂದಿನ ಕೊರೊನಾ ಪ್ರಕರಣ
ಸಾವಿನ ಶೇಕಡಾವಾರು ಪ್ರಮಾಣ ಮತ್ತೆ ಶೇ.2.01ರಷ್ಟು ಇದೆ. ಇನ್ನು, ವಿಮಾನ ನಿಲ್ದಾಣದಿಂದ 35 ಪ್ರಯಾಣಿಕರು ಆಗಮಿಸಿ ತಪಾಸಣೆಗೊಳ್ಳಪಟ್ಟಿದ್ದಾರೆ. ಯುಕೆಯಿಂದ 53 ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದಾರೆ..
ಕರ್ನಾಟಕದಲ್ಲಿ ಕೊರೊನಾ
17,913 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 25,99,472 ಜನರು ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1,51,566ರಷ್ಟು ಇದ್ದು, ಕೋವಿಡ್ಗೆ 148 ಸೋಂಕಿತರು ಮೃತರಾಗಿದ್ದಾರೆ. ಸಾವಿನ ಸಂಖ್ಯೆ 33,296ಕ್ಕೆ ಏರಿದೆ.
ಸಾವಿನ ಶೇಕಡಾವಾರು ಪ್ರಮಾಣ ಮತ್ತೆ ಶೇ.2.01ರಷ್ಟು ಇದೆ. ಇನ್ನು, ವಿಮಾನ ನಿಲ್ದಾಣದಿಂದ 35 ಪ್ರಯಾಣಿಕರು ಆಗಮಿಸಿ ತಪಾಸಣೆಗೊಳ್ಳಪಟ್ಟಿದ್ದಾರೆ. ಯುಕೆಯಿಂದ 53 ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದಾರೆ.