ಬೆಂಗಳೂರು: ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಕ್ರೀಡಾ ಕ್ಷೇತ್ರದಲ್ಲಿ, ಯಾವುದೇ ಕ್ರೀಡಾ ಚಟುವಟಿಕೆಗಳು ಆರಂಭವಾಗಿಲ್ಲ. ಇದರ ನಡುವೆ ಅನ್ಲಾಕ್ ನಂತರ ಕ್ರೀಡಾ ತರಬೇತಿ ನೀಡುವ ಸರ್ಕಾರದ ಕ್ರೀಡಾ ಸಂಘದ 73 ಕೋಚ್ಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಕ್ರೀಡಾ ಸಂಘದ 73 ಕೋಚ್ಗಳು ಕೆಲಸದಿಂದ ವಜಾ..! - ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಕ್ರೀಡಾ ಕ್ಷೇತ್ರ
ಅನ್ಲಾಕ್ ನಂತರ ಕ್ರೀಡಾ ತರಬೇತಿ ನೀಡುವ ಸರ್ಕಾರದ ಕ್ರೀಡಾ ಸಂಘದ 73 ಕೋಚ್ಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
![ಕ್ರೀಡಾ ಸಂಘದ 73 ಕೋಚ್ಗಳು ಕೆಲಸದಿಂದ ವಜಾ..! 73 coaches of sports association Dismissed](https://etvbharatimages.akamaized.net/etvbharat/prod-images/768-512-9693013-thumbnail-3x2-smk.jpg)
ಕ್ರೀಡಾ ಸಂಘದ 73 ಕೋಚ್ಗಳು ಕೆಲಸದಿಂದ ವಜಾ
ವಾರ್ಷಿಕವಾಗಿ ಗುತ್ತಿಗೆ ಮೇರೆಗೆ ಕೆಲಸ ಮಾಡುತ್ತಿದ್ದ ಈ ಕೋಚ್ಗಳು ಈಗ ಅತಂತ್ರ ಸ್ಥಿತಿಗೆ ಬಂದಿದ್ದಾರೆ. ಇನ್ನು ಕ್ರೀಡಾ ಕಾಲೇಜ್ ಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳು, ಸದ್ಯಕ್ಕೆ ಕಾಲೇಜು ಇಲ್ಲದ ಕಾರಣ ಕೂಲಿ ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ ಸಡಿಲಗೊಂಡ ನಂತರ ಕ್ರೀಡಾ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿಲ್ಲ. ಕೋವಿಡ್ ಭೀತಿಯಿಂದ ಮಕ್ಕಳನ್ನು ಪೋಷಕರು ತರಬೇತಿಗೆ ಬಿಡುತ್ತಿಲ್ಲ.
ಕೆಲಸದಿಂದ ವಜಾ ಆಗಿರುವ ಕೋಚ್ಗಳು ತಮ್ಮ ಸಾಧನೆ ಹಾಗೂ ತರಬೇತಿಯ ಕೌಶಲ್ಯತೆ ನೋಡಿ, ಕೆಲಸ ಮುಂದುವರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
TAGGED:
ಕ್ರೀಡಾ ತರಬೇತಿ