ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಇಂದು 7,051 ಜನರಿಗೆ ಸೋಂಕು ಧೃಡ; 84 ಮಂದಿ ಮಹಾಮಾರಿಗೆ ಬಲಿ - ಕೋವಿಡ್​ ಸುದ್ದಿ

ರಾಜ್ಯದಲ್ಲಿ ಇಂದು ಹೊಸದಾಗಿ 7,051 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 6,47,712 ಕ್ಕೆ ಏರಿಕೆ ಆಗಿದೆ.

corona
ಕೊರೊನಾ

By

Published : Oct 5, 2020, 10:25 PM IST

Updated : Oct 5, 2020, 10:59 PM IST

ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾಗೆ 84 ಸೋಂಕಿತರು ಬಲಿಯಾಗಿದ್ದು ಈ ಮೂಲಕ ಸಾವಿನ‌ ಸಂಖ್ಯೆ 9,370 ಕ್ಕೆ ಏರಿಕೆ ಆಗಿದೆ.‌ 19 ಸೋಂಕಿತರು ಅನ್ಯಕಾರಣಕ್ಕೆ ಮೃತರಾಗಿದ್ದಾರೆ. ಇಂದು ಹೊಸದಾಗಿ 7,051 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 6,47,712 ಕ್ಕೆ ಏರಿಕೆ ಆಗಿದೆ.

ಇಂದು 7,064 ಮ‌ಂದಿ ಗುಣಮುಖರಾಗಿದ್ದು, 5,22,846 ಮಂದಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. 1,15,477 ಸಕ್ರಿಯ ಪ್ರಕರಣಗಳು ಇದ್ದು, 841 ಮಂದಿ ತೀವ್ರ ನಿಗಾ ಘಟಕದಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. 2,13,587 ಕಳೆದ 7 ದಿನಗಳಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಪ್ರಾಥಮಿಕ ಹಂತದಲ್ಲಿ 4,99,590 ದ್ವಿತೀಯ ಹಂತದಲ್ಲಿ 4,40,949 ಜನರು ಸೋಂಕಿತರ ಸಂಪರ್ಕದಲ್ಲಿ ಇದ್ದಾರೆ.

ಜವಾಬ್ದಾರಿ ನಿರ್ವಹಿಸದೇ ಇದ್ದರೆ ಉಲ್ಲಂಘನೆ ಎಂದು ಪರಿಗಣನೆ

ಕೊರೊನಾ‌ ತೀವ್ರಗತಿಯಲ್ಲಿ ಏರುತ್ತಿದ್ದು, ಇಂತಹ ಸಮಯದಲ್ಲಿ ಬೇಡಿಕೆ ಈಡೇರಿಕೆ ಅಂತ ಮುಷ್ಕರ ಪ್ರತಿಭಟನೆ ಮಾಡುವ ಸಿಬ್ಬಂದಿಗೆ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಎಲ್ಲಾ ಸಾರ್ವಜನಿಕ ವಲಯದ ಅಧಿಕಾರಿಗಳು/ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ, ಖಾಯಂ , ಗುತ್ತಿಗೆ-ಹೊರಗುತ್ತಿಗೆ ಆಧಾರದ ಸಿಬ್ಬಂದಿ, ಕಾರ್ಯಕರ್ತರು ಜವಾಬ್ದಾರಿ ಹೆಚ್ಚಿದೆ.

ಹೀಗಾಗಿ, ಮೇಲಾಧಿಕಾರಿಯಿಂದ ನೀಡಲಾದ ಜವಾಬ್ದಾರಿ ನಿರ್ವಹಿಸದೇ, ನಿರಾಕರಿಸುವುದನ್ನ ಮಾಡಿದ್ದರೆ, ನಿಯಮ ಹಾಗೂ ಆದೇಶಗಳ ನಿಬಂಧನೆಗಳನ್ನು ಉಲ್ಲಂಘನೆ ಮಾಡಿದ್ದರೆ ರಾಷ್ಟೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ‌ ನೀಡಿದೆ. ದಂಡ ಪ್ರಯೋಗ ಮಾಡುವ ಅವಕಾಶವಿದೆ ಎಂದು ಎಚ್ಚರಿಕೆ ನೀಡಿ ಆದೇಶ ಹೊರಡಿಸಲಾಗಿದೆ.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಮುಷ್ಕರ, ಅಸಹಕಾರ, ಕೆಲಸ ಮಾಡದೇ ನಿರಾಕರಿಸುವುದು, ಕೋವಿಡ್ ಸೇರಿದಂತೆ ಕಾರ್ಯಕ್ರಮಗಳ ವರದಿಗಳನ್ನು ಸಲ್ಲಿಸದೇ ಇರುವುದನ್ನ ನಿಷೇಧಿಸಿ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದೆ.

Last Updated : Oct 5, 2020, 10:59 PM IST

ABOUT THE AUTHOR

...view details