ಬೆಂಗಳೂರು: ನಗರದ ಹೋಟೆಲ್ಗೆ ಮಧ್ಯರಾತ್ರಿ ಕಳ್ಳರ ಗುಂಪು ಲಗ್ಗೆಯಿಟ್ಟಿದೆ. ಮೊಬೈಲ್ ಟಾರ್ಚ್ ಹಿಡಿದು ಹೊಟೇಲ್‌ಗೆ ನುಗ್ಗಿದ ಕಳ್ಳರು ರಾಡ್ ನಿಂದ ಲಾಕರ್ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.
ಕಳೆದ ಫೆಬ್ರುವರಿ 8ರಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಜಯನಗರದ ನೈವೇದ್ಯಮ್ ಹೋಟೆಲ್ನಲ್ಲಿ ಘಟನೆ ನಡೆದಿದ್ದು. ಕಳ್ಳತನಕ್ಕೆ ಕದ್ದ ಬೈಕ್ ಬಳಸಿದ್ದಾರೆ ಎಂದು ಹೇಳಲಾಗುತ್ತಿದೆ. ಶೆಟರ್ ಬೀಗ ಒಡೆದು ಹೋಟೆಲ್ ಒಳಗೆ ನುಗ್ಗಿರುವ ಕಳ್ಳರು, ಮೊಬೈಲ್ ಟಾರ್ಚ್ ಬಳಸಿ ಕಳ್ಳತನ ಮಾಡಿದ್ದಾರೆ. ಕಳ್ಳರು ಲಾಕರ್ ಒಡೆದು ಹಣ ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸರೆಯಾಗಿದೆ.