ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ನಿರ್ಮಾಣ ಸಂಸ್ಥೆ ಮೇಲೆ ಐಟಿ ದಾಳಿ: 70 ಕೋಟಿ ರೂ. ಲೆಕ್ಕಕ್ಕೆ ಸಿಗದ ಆದಾಯ ಪತ್ತೆ - ಐಟಿ ದಾಳಿಯಲ್ಲಿ 70 ಕೋಟಿ ಆದಾಯ ಪತ್ತೆ

ಕರ್ನಾಟಕದ ಪ್ರಮುಖ ನಿರ್ಮಾಣ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಈ ವೇಳೆ ಬರೋಬ್ಬರಿ 70 ಕೋಟಿ ರೂ. ಪತ್ತೆಯಾಗಿದೆ.

income tax department
ಆದಾಯ ತೆರಿಗೆ ಇಲಾಖೆ

By

Published : Nov 3, 2021, 5:10 PM IST

ಬೆಂಗಳೂರು:ರಾಜ್ಯದ ಪ್ರಮುಖ ನಿರ್ಮಾಣ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಈ ವೇಳೆ 70 ಕೋಟಿ ರೂ. ಲೆಕ್ಕಕ್ಕೆ ಸಿಗದ ಆದಾಯ ಪತ್ತೆಯಾಗಿದೆ ಎಂದು ಇಲಾಖೆ ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿದೆ.

ಅಕ್ಟೋಬರ್ 28ರಂದು ಕಂಪನಿಯ ವಿವಿಧ ಕಡೆಗಳಲ್ಲಿ ದಾಳಿ ನಡೆಸಿದ್ದು, ವಸ್ತುಗಳ ಖರೀದಿ, ಕಾರ್ಮಿಕರ ಖರ್ಚು ವೆಚ್ಚಗಳಲ್ಲಿ ಉಪ ಗುತ್ತಿಗೆದಾರರಿಗೆ ಹಣಪಾವತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಾಭವನ್ನು ಮರೆ ಮಾಚಿರುವ ವಿಚಾರ ಪುರಾವೆಗಳ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.

ದಾಳಿ ವೇಳೆ ನೈಜವಲ್ಲದ ಕ್ಲೈಮ್‌ಗಳನ್ನು ಸೂಚಿಸುವ ಡಿಜಿಟಲ್ ಪುರಾವೆಗಳು ಹಾಗೂ ವಸ್ತುಗಳ ಮಾರಾಟಗಾರರು ಮತ್ತು ಪೂರೈಕೆದಾರರಂತಹ ಪ್ರಮುಖ ಗುಂಪಿನ ವ್ಯಕ್ತಿಯಿಂದ ಲೆಕ್ಕಕ್ಕೆ ಸಿಗದ ಹಣ ಸೇರಿದಂತೆ ವಿವಿಧ ದಾಖಲೆಗಳನ್ನು ಆದಾಯ ಇಲಾಖೆ ವಶಪಡಿಸಿಕೊಂಡಿದೆ.

ಸಂಸ್ಥೆಯ ಮಾಲೀಕರ, ಯಾವುದೇ ಕೆಲಸವನ್ನೂ ಮಾಡದ ಕುಟುಂಬ ಸದಸ್ಯರು, ಸ್ನೇಹಿತರು, ಉದ್ಯೋಗಿಗಳನ್ನೇ ಉಪಗುತ್ತಿಗೆದಾರರ ಹೆಸರಿನಲ್ಲಿ ಹಣ ಪಡೆದು ಲಾಭ ಮರೆಮಾಚುವುದಕ್ಕೆ ಸಹಕರಿಸುತ್ತಿದ್ದರು ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: ವಾರಾಂತ್ಯದವರೆಗೂ ರಾಜ್ಯದಲ್ಲಿ ಗುಡುಗುಸಹಿತ ಮಳೆ: ಯಲ್ಲೋ ಅಲರ್ಟ್​ ಘೋಷಣೆ

ABOUT THE AUTHOR

...view details