ಕರ್ನಾಟಕ

karnataka

ETV Bharat / state

ಲಸಿಕೆ ಪಡೆದ 7 ಮಂದಿಗೆ ಅಲ್ಪ ಅಡ್ಡಪರಿಣಾಮ.. ಬೆಂಗಳೂರಲ್ಲಿ ಲಸಿಕೆ ಪಡೆದವರೆಷ್ಟು..? - ಕೊರೊನಾ ಲಸಿಕೆ ಅಡ್ಡಪರಿಣಾಮ

ನಗರದಲ್ಲಿ ಲಸಿಕೆ ಪಡೆದ ಕೆಲವರಲ್ಲಿ ಅಡ್ಡಪರಿಣಾಮ ಕಾಣಿಸಿಕೊಂಡಿತ್ತು. ಅವರಲ್ಲಿ ಐವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಇದೀಗ ಇಬ್ಬರೂ ಆರೋಗ್ಯವಾಗಿದ್ದಾರೆ. ಈವರೆಗೆ 436 ಲಸಿಕೆ ಕೇಂದ್ರಗಳಲ್ಲಿ 20,411 ಜನರಿಗೆ ಲಸಿಕೆ ನೀಡಲಾಗಿದೆ.

BBMP Office
ಬಿಬಿಎಂಪಿ ಕಚೇರಿ

By

Published : Jan 21, 2021, 8:39 PM IST

ಬೆಂಗಳೂರು:ನಗರದಲ್ಲಿ ಕೊರೊನಾ ಲಸಿಕೆ ವಿತರಣೆ ಕಾರ್ಯ ನಡೆಯುತ್ತಿದೆ. ಈ ನಡುವೆ6 ದಿನಗಳಲ್ಲಿ ಲಸಿಕೆ ಪಡೆದ 3,942 ಜನರ ಪೈಕಿ 7 ಮಂದಿಯಲ್ಲಿ ಸಣ್ಣ ಪ್ರಮಾಣದ ಅಡ್ಡ ಪರಿಣಾಮ ಕಂಡುಬಂದಿದೆ. ಆದರೆ ಗಂಭೀರ ಪ್ರಕರಣಗಳು ಕಂಡುಬಂದಿಲ್ಲ.

ಲಸಿಕೆ ಪಡೆದ ಇಬ್ಬರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿದ್ದು, ಅವರು ಗುಣಮುಖರಾಗಿದ್ದಾರೆ ಎಂದು ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಮಾಹಿತಿ ನೀಡಿದ್ದಾರೆ.

ಕೊರೊನಾ ಲಸಿಕೆ ಪಡೆದವರಲ್ಲಿ ಯಲಹಂಕ ವಲಯದಲ್ಲಿ 2, ಪಶ್ವಿಮ ವಲಯ 2 , ಆರ್ ಆರ್ ನಗರ 2, ಪೂರ್ವ ವಲಯದ ಒಬ್ಬರಲ್ಲಿ ಅಡ್ಡ ಪರಿಣಾಮಗಳಾದ ‌ಜ್ವರ, ಮೈ ಕೈ ನೋವು, ತಲೆ ಸುತ್ತು, ಕುಸಿದು ಬೀಳುವ ಲಕ್ಷಣಗಳು ಕಂಡುಬಂದಿದೆ. ಯಲಹಂಕದ ಆರೋಗ್ಯ ಕಾರ್ಯಕರ್ತರೊಬ್ಬರು ಲಸಿಕೆ ಪಡೆದ ಕೂಡಲೇ ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ನಾನಾ ಕಾರಣ ನೀಡಿ, ಲಸಿಕೆಯಿಂದ ದೂರ ಉಳಿದ ಆರೋಗ್ಯ ಕಾರ್ಯಕರ್ತರಿಗೆ ಮತ್ತೆ ದಿನಾಂಕಗಳನ್ನು ನಿಗದಿಪಡಿಸಬೇಕಾಗಿದೆ ಎಂದು ವಿಜೇಂದ್ರ ತಿಳಿಸಿದರು.

ಮೊದಲ ಹಂತದ ವ್ಯಾಕ್ಸಿನ್ ಅಭಿಯಾನ ಪೂರ್ಣವಾಗಲು 10 ದಿನ ಬೇಕು. ಒಂದು ಲಸಿಕೆ ವಿತರಣಾ ಸ್ಥಳಕ್ಕೆ 100 ಜನರಂತೆ ಲಿಸ್ಟ್ ರೆಡಿ ಮಾಡಿ ಕ್ರಿಯಾ ಯೋಜನೆ ಮಾಡಬೇಕಾಗಿದೆ. ವ್ಯಾಕ್ಸಿನ್ ಬಂದ ಮೇಲೆ 300 ರಿಂದ 400 ಪಾಸಿಟಿವ್ ಕೇಸ್​​ಗಳು ಮಾತ್ರ ಬರುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಬೇಕಾಗಿದೆ. ಇದಕ್ಕಾಗಿ 436 ಲಸಿಕೆ ಕೇಂದ್ರಗಳಲ್ಲಿ 20,411 ಜನರಿಗೆ ಲಸಿಕೆ ನೀಡಲಾಗಿದೆ. ಇನ್ನು ಮೊದಲ ಯೋಜನೆಯಂತೆ 1 ಲಕ್ಷ 82 ಸಾವಿರ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಬೇಕಿದೆ ಎಂದಿದ್ದಾರೆ.

ಎರಡನೇ ಹಂತದ ಲಸಿಕೆ ನೀಡಲು ಫೆ.18ರ ವರೆಗೂ ಕಾಯಬೇಕಿದೆ. ಬಿಬಿಎಂಪಿ, ಜಲಮಂಡಳಿ ಸಿಬ್ಬಂದಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವ ಹೊಣೆ ಹೊತ್ತಿವೆ. ಪಾಲಿಕೆ ವತಿಯಿಂದ ಸುಮಾರು 30 ಸಾವಿರ ಫಲಾನುಭವಿಗಳ ನಿರೀಕ್ಷೆ ಇದೆ. ಇತ್ತ ಪೌರ ಕಾರ್ಮಿಕರು, ಕಂದಾಯ, ಇಂಜಿನಿಯರಿಂಗ್ ವಿಭಾಗ ಎಲ್ಲರ ಹೆಸರು ಸೇರ್ಪಡೆಯಾಗಲಿವೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಸರ್ಕಾರಿ ವೈದ್ಯರಿಗೆ ಮೂಲಸೌಕರ್ಯ ಕಲ್ಪಿಸಿ.. ನಕಲಿ ವೈದ್ಯರ ಹಾವಳಿ ನಿವಾರಿಸಿ..!

ABOUT THE AUTHOR

...view details