ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಬೈಕ್ನಲ್ಲಿಟ್ಟು ಹಣ ಸಾಗಾಟ ಮಾಡುತ್ತಿದ್ದ 7 ಲಕ್ಷ ರೂಪಾಯಿ ಫ್ಲೈಯಿಂಗ್ ಸ್ಕ್ವಾಡ್ ಪತ್ತೆ ಹಚ್ಚಿ ಜಪ್ತಿ ಮಾಡಿಕೊಂಡಿದೆ.
ಆರ್.ಆರ್ ನಗರ ಬೈ ಎಲೆಕ್ಷನ್: ಏಳು ಲಕ್ಷ ಹಣ ವಶಕ್ಕೆ ಪಡೆದ ಫ್ಲೈಯಿಂಗ್ ಸ್ಕ್ವಾಡ್! - 7 ಲಕ್ಷ ರೂಪಾಯಿ ಫ್ಲೈಯಿಂಗ್ ಸ್ಕ್ವಾಡ್ ಪತ್ತೆ
ಆರ್ಆರ್ ನಗರದಲ್ಲಿ ಹಣದ ಹೊಳೆ ಹರೆಯುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಇದರ ಮಧ್ಯೆ 7 ಲಕ್ಷ ರೂ. ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.
Bengaluru RR Nagar
ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಮುತ್ತುರಾಯನಗರದ ಚೆಕ್ಪೋಸ್ಟ್ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಸುಜುಕಿ ಬೈಕ್ನಲ್ಲಿ ರಮೇಶ್ ಹಾಗೂ ಮಾಣಿಕ್ ಚಂದ್ ಎಂಬುವವರು ಹಣ ಸಾಗಿಸುತ್ತಿದ್ದರು.
ಕೂಡಲೇ ವಶಕ್ಕೆ ಪಡೆದುಕೊಂಡುವಿಚಾರಣೆಗೊಳಪಡಿಸಿದಾಗ ಕೆ.ಆರ್ ಮಾರ್ಕೆಟ್ ಬಳಿ ಇರುವ ಜ್ಯೂವೆಲ್ಲರಿ ಶಾಪ್ ಕೆಲಸಗಾರರು 1 ವಾರದ ಕಲೆಕ್ಷನ್ ಹಣ ಕೊಂಡೊಯ್ಯುತ್ತಿರುವುದಾಗಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆಗೊಳಪಡಿಸಿರುವುದಾಗಿ ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
Last Updated : Oct 27, 2020, 7:01 AM IST