ಕರ್ನಾಟಕ

karnataka

ETV Bharat / state

ಬಿಬಿಎಂಪಿ ಬಜೆಟ್​ಗೆ 665 ಕೋಟಿ ರೂ ಹೆಚ್ಚುವರಿ ಅನುದಾನ.. ಅನುಮೋದನೆ - ಬಿಬಿಎಂಪಿಯ 2021-22 ನೇ ಸಾಲಿನ ಬಜೆಟ್​

ಬಿಬಿಎಂಪಿ ಬಜೆಟ್​ಗೆ 665 ಕೋಟಿ ರೂ ಹೆಚ್ಚುವರಿ ಸೇರ್ಪಡೆಗೊಳಿಸಿ ಅನುಮೋದನೆ ನೀಡಲಾಗಿದೆ. ಈ ಬಾರಿ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಯ್ಕೆಯಾಗಿಲ್ಲದ ಕಾರಣ ಮೇಯರ್, ಉಪಮೇಯರ್, ಆರ್ಥಿಕ ಸ್ಥಾಯಿ ಸಮಿತಿ ವಿವೇಚನೆಯಡಿ ಬಳಸಲು ವಿಶೇಷ ಅನುದಾನ ಮೀಸಲಿಡಲಾಗುತ್ತಿತ್ತು. ಆದರೆ, ಈ ಬಾರಿ ಮುಖ್ಯ ಆಯುಕ್ತರ ವಿವೇಚನೆಯ ಬಳಕೆಗೆ 20 ಕೋಟಿ ರೂ ಕಾಯ್ದಿರಿಸಿದ್ದು ,ಬಿಟ್ಟರೆ ಉಳಿದವರು ವಿವೇಚನೆಯಡಿ ಹೊಸ ಕಾಮಗಾರಿ ಕೈಗೊಳ್ಳಲು ಅನುದಾನ ಮೀಸಲಿಟ್ಟಿರಲಿಲ್ಲ.

665 crores addition to BBMP budget
ಬಿಬಿಎಂಪಿ ಬಜೆಟ್​ಗೆ 665 ಕೋಟಿ ರೂ ಹೆಚ್ಚುವರಿ ಸೇರ್ಪಡೆಗೊಳಿಸಿ ಅನುಮೋದನೆ

By

Published : Jun 17, 2021, 8:10 PM IST

ಬೆಂಗಳೂರು: ಬಿಬಿಎಂಪಿಯ 2021-22 ನೇ ಸಾಲಿನ ಬಜೆಟ್​ಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದ್ದು, ಪಾಲಿಕೆ ಮಂಡಿಸಿದ ಮೊತ್ತಕ್ಕಿಂತ 665 ಕೋಟಿ ರೂ ಹೆಚ್ಚುವರಿ ಸೇರ್ಪಡೆ ಮಾಡಲಾಗಿದೆ. ಸಾಮಾನ್ಯವಾಗಿ ಪಾಲಿಕೆಯ ಅನಗತ್ಯ ಯೋಜನೆಗಳಿಗೆ ಕತ್ತರಿ ಹಾಕಿ, ಅನುಮೋದನೆಗೊಳಿಸುವಾಗ ಬಜೆಟ್ ಗಾತ್ರ ಕುಗ್ಗಿಸುವುದು ವಾಡಿಕೆಯಾದರೆ ಈ ಬಾರಿ ಹೆಚ್ಚಳವಾಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬಿಬಿಎಂಪಿ ಬಜೆಟ್​ಗೆ 665 ಕೋಟಿ ರೂ ಹೆಚ್ಚುವರಿ ಸೇರ್ಪಡೆಗೊಳಿಸಿ ಅನುಮೋದನೆ

ವೈಜ್ಞಾನಿಕವಾಗಿ ಮಂಡನೆ ಮಾಡಬೇಕೆಂಬ ಉದ್ದೇಶದಿಂದ ಈ ಬಾರಿ 9,286.80 ಗಾತ್ರದ ಬಜೆಟ್​ ಅನ್ನು ಆಡಳಿತಗಾರರ ನೇತೃತ್ವದಲ್ಲಿ ಅಂಗೀಕರಿಸಲಾಗಿತ್ತು. ನಗರಾಭಿವೃದ್ಧಿ ಇಲಾಖೆ ಪರಿಷ್ಕರಿಸಿ ಒಟ್ಟು ರೂ 9,951.8 ಕೋಟಿ ಗಾತ್ರದ ಬಜೆಟ್​ಗೆ ಅನುಮೋದನೆ ನೀಡಿದೆ‌. ಈ ಬಾರಿ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಯ್ಕೆಯಾಗಿಲ್ಲದ ಕಾರಣ ಮೇಯರ್, ಉಪಮೇಯರ್, ಆರ್ಥಿಕ ಸ್ಥಾಯಿ ಸಮಿತಿ ವಿವೇಚನೆಯಡಿ ಬಳಸಲು ವಿಶೇಷ ಅನುದಾನ ಮೀಸಲಿಡಲಾಗುತ್ತಿತ್ತು.

ಆದರೆ ಈ ಬಾರಿ ಮುಖ್ಯ ಆಯುಕ್ತರ ವಿವೇಚನೆಯ ಬಳಕೆಗೆ 20 ಕೋಟಿ ರೂ ಕಾಯ್ದಿರಿಸಿದ್ದು ಬಿಟ್ಟರೆ ಉಳಿದವರು ವಿವೇಚನೆಯಡಿ ಹೊಸ ಕಾಮಗಾರಿ ಕೈಗೊಳ್ಳಲು ಅನುದಾನ ಮೀಸಲಿಟ್ಟಿರಲಿಲ್ಲ. ಇದೀಗ ನಗರಾಭಿವೃದ್ಧಿ ಇಲಾಖೆಯು 385 ಕೋಟಿ ರೂ ಮೊತ್ತವನ್ನು ವಿವೇಚನಾ ಬಳಕೆಗೆ ಹೆಚ್ಚುವರಿಯಾಗಿ ಮೀಸಲಿಟ್ಟಿದ್ದು, ಇದರ ಸಿಂಹಪಾಲು ಉಸ್ತುವಾರಿ ಸಚಿವರಿಗೆ ಲಭಿಸಲಿದೆ.

ಸದ್ಯ ನಗರದ ಉಸ್ತುವಾರಿ ಹೊಣೆ ಸಿಎಂ ಬಳಿಯೇ ಇದೆ. ಇನ್ನುಳಿದಂತೆ ಮೇಯರ್​ಗೆ ಐವತ್ತು ಕೋಟಿ, ಉಪಮೇಯರ್​ಗೆ 35 ಕೋಟಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ 15 ಕೋಟಿ ಅನುದಾನ ಹೆಚ್ಚುವರಿಯಾಗಿ ಹಂಚಿಕೆ ಮಾಡಿಲಾಗಿದ್ದು, ಸದ್ಯ ಈ ಸ್ಥಾನಗಳ ಅಧಿಕಾರ ಆಡಳಿತಗಾರರಾದ ರಾಕೇಶ್ ಸಿಂಗ್ ಕೈಯಲ್ಲಿದೆ.

ಇನ್ನು ಮುಖ್ಯ ಆಯುಕ್ತರ ವಿವೇಚನೆಯ ಅನುದಾನವನ್ನು 35 ಕೋಟಿ ರೂಗೆ ಏರಿಸಲಾಗಿದೆ. ಅನಿವಾರ್ಯ ಇರುವ ಹೊಸ ಕಾಮಗಾರಿಗಳಿಗಾಗಿ 385 ಕೋಟಿ ರೂ ವಿವೇಚನೆಯಡಿ ಬಳಸುವುದಕ್ಕೆ ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಬಾರಿಯೂ ಬಿಬಿಎಂಪಿಯದ್ದು ಕೊರತೆಯ ಬಜೆಟ್ ಆಗಿಯೇ ಮುಂದುವರಿಯಲಿದೆ ಎನ್ನಲಾಗಿದೆ.

ವಿವೇಚನಾ ಅನುದಾನದ ಪರಿಷ್ಕರಣೆ ವಿವರ(ಬಾಕಿ ಮೊತ್ತ, ಪ್ರಗತಿಯ ಕಾಮಗಾರಿ, ಹೊಸ ಕಾಮಗಾರಿ, ಒಟ್ಟು)

ಯಾರಿಗೆ : ಬಾಕಿ.ಮೊ : ಪ್ರ.ಕಾ : ಹೊ.ಕಾ : ಒಟ್ಟು

ಮೇಯರ್ : 32.28. 10. 50. 92.28

ಉ.ಮೇಯರ್ : 27.95. 15. 35. 77.95

ಮು.ಆಯುಕ್ತರು : 6.48. 10. 35. 51.48

ತೆ-ಆ ಸ್ಥಾಯಿ ಸಮಿತಿ : 21.72. 15. 15. 51.72

ಜಿ.ಉಸ್ತುವಾರಿ ಸಚಿವ :32.20. 15. 250. 297.20

ಓದಿ:ನಾಳೆ ಮಹತ್ವದ ಕೋರ್ ಕಮಿಟಿ ಸಭೆ ನಡೆಸಲಿರುವ ಅರುಣ್ ಸಿಂಗ್..!

ABOUT THE AUTHOR

...view details