ಬೆಂಗಳೂರು: ನಗರದಲ್ಲಿಂದು 6,476 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 777 ಸೋಂಕಿತರು ಅಧಿಕಾರಿಗಳ ಕೈಗೆ ಸಿಗದೆ ನಾಪತ್ತೆಯಾಗಿದ್ದಾರೆ.
ಬೊಮ್ಮನಹಳ್ಳಿಯಲ್ಲಿ 659, ದಾಸರಹಳ್ಳಿ 227, ಬೆಂಗಳೂರು ಪೂರ್ವ 878, ಮಹಾದೇವಪುರ 1,081, ಆರ್.ಆರ್ ನಗರ 405, ಬೆಂಗಳೂರು ದಕ್ಷಿಣ 647, ಬೆಂಗಳೂರು ಪಶ್ಚಿಮ 488, ಯಲಹಂಕ 422 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಒಟ್ಟು 777 ಕೋವಿಡ್ ಸೋಂಕಿತರು ಪಾಲಿಕೆಯ ಸಂಪರ್ಕಕ್ಕೆ ಸಿಗುತ್ತಿಲ್ಲ.