ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಹೊಸದಾಗಿ 62 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 39,45,576ಕ್ಕೆ ಏರಿಕೆ ಆಗಿದೆ. ಇದೇ 70 ಸೋಂಕಿತರು ಚೇತರಿಸಿಕೊಂಡಿದ್ದು, ಈ ತನಕ ಗುಣಮುಖರಾದವರ ಸಂಖ್ಯೆ 39,03,919 ಆಗಿದೆ. ಶುಕ್ರವಾರ 21,295 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು.
ರಾಜ್ಯದಲ್ಲಿ 62 ಮಂದಿಗೆ ಕೋವಿಡ್ ಪತ್ತೆ: 70 ಸೋಂಕಿತರು ಚೇತರಿಕೆ - ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು
ಶುಕ್ರವಾರ 21,295 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. 62 ಮಂದಿಗೆ ಸೋಂಕು ಪತ್ತೆಯಾಗಿದ್ದು, ಪಾಸಿಟಿವ್ ದರವೂ ಶೇ.0.29ರಷ್ಟಿದೆ. ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.
covid_bulletin
62 ಮಂದಿಗೆ ಸೋಂಕು ಪತ್ತೆಯಾಗಿದ್ದು, ಪಾಸಿಟಿವ್ ದರವೂ ಶೇ.0.29ರಷ್ಟಿದೆ. ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ. ಸದ್ಯ ಸಾವಿನ ಸಂಖ್ಯೆ 40,053 ರಷ್ಟಿದೆ. 1,561 ಸಕ್ರಿಯ ಪ್ರಕರಣಗಳು ಇವೆ. ವಿಮಾನ ನಿಲ್ದಾಣದಿಂದ 2,458 ಪ್ರಯಾಣಿಕರು ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ 48 ಸೋಂಕು ತಗುಲಿದ್ದು 17,81,688ಕ್ಕೆ ಏರಿಕೆ ಆಗಿದೆ. 59 ಮಂದಿ ಡಿಸ್ಜಾರ್ಜ್ ಆಗಿದ್ದು, ಈ ತನಕ ಸೋಂಕಿತರ ಸಂಖ್ಯೆ 17,63,293ಕ್ಕೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 1,434 ಸಕ್ರಿಯ ಪ್ರಕರಣಗಳು ಇವೆ.
ರೂಪಾಂತರಿ ವೈರಸ್ ವಿವರ
- ಅಲ್ಪಾ- 156
- ಬೇಟಾ-08
- ಡೆಲ್ಟಾ ಸಬ್ ಲೈನ್ ಏಜ್- 4620
- ಇತರ- 311
- ಒಮಿಕ್ರಾನ್- 3081
- BAI.1.529- 828
- BA1- 98
- BA2- 2155
- ಒಟ್ಟು- 8176