ಬೆಂಗಳೂರು:ರಾಜ್ಯದಲ್ಲಿ ಇಂದು 19,757 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 617 ಜನರಿಗೆ ಸೋಂಕು ದೃಢಪಟ್ಟಿದೆ. 767 ಮಂದಿ ವೈರಸ್ನಿಂದ ಚೇತರಿಸಿಕೊಂಡಿದ್ದಾರೆ. ಇಂದಿನ ಕೋವಿಡ್ ಸಾವಿನ ಸಂಖ್ಯೆ ಶೂನ್ಯವಾಗಿದ್ದು, ಸದ್ಯ 4,288 ಸಕ್ರಿಯ ಪ್ರಕರಣಗಳಿವೆ.
ಸೋಂಕಿತರ ಪ್ರಮಾಣ ಶೇ. 3.12, ವಾರದ ಸೋಂಕಿತರ ಪ್ರಮಾಣ ಶೇ. 3.45 ಹಾಗೂ ವಾರದ ಸಾವಿನ ಪ್ರಮಾಣ ಶೇ. 0.01 ಇದೆ. ವಿಮಾನ ನಿಲ್ದಾಣದಿಂದ 5,776 ಮಂದಿ ತಪಾಸಣೆಗೆ ಒಳಗಾಗಿದ್ದಾರೆ.