ಬೆಂಗಳೂರು: ಚಿತ್ರಕಲಾ ಪರಿಷತ್‌ನ 60ನೇ ವಾರ್ಷಿಕೋತ್ಸವದ ಅಂಗವಾಗಿ ವಿಭಿನ್ನವಾದ ಚಿತ್ರಕಾಲ ಪ್ರದರ್ಶನ ಏರ್ಪಡಿಸಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಕಲಾ ಪ್ರಿಯರನ್ನು ಆಕರ್ಷಿಸುತ್ತಿವೆ ಗ್ರಾಫಿಕ್ ಪ್ರಿಂಟ್ ಕಲಾಕೃತಿಗಳು - ಗ್ರಾಫಿಕ್ ಪ್ರಿಂಟ್ ಕಲಾಕೃತಿಗಳು
ಚಿತ್ರಕಲಾ ಪರಿಷತ್‌ನ 60ನೇ ವಾರ್ಷಿಕೋತ್ಸವದ ಅಂಗವಾಗಿ ಒಂದು ತಿಂಗಳ ಕಾಲ ಚಿತ್ರಕಲಾ ಪ್ರದರ್ಶನ ನಡೆಯಲಿದೆ.
ಇಲ್ಲಿನ ಕಲಾಕೃತಿಗಳು ಕಲಾ ಪ್ರಿಯರನ್ನು ನಿಬ್ಬೆರಗಾಗಿಸಿದ್ದು, ಈ ಚಿತ್ರಕಲೆಗಳನ್ನೆಲ್ಲ ಬಿಡಿಸಿದ್ದು ಭಾರತೀಯರು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಗಳಿಸಿರುವ ಭಾರತೀಯ ಕಲಾವಿದರು ಎಂಬುದು ವಿಶೇಷ. ಈ ಚಿತ್ರಕಲೆಯ ಮತ್ತೊಂದ ವಿಶೇಷತೆ ಏನೆಂದ್ರೆ ಇವು ಗ್ರಾಫಿಕ್ ಪ್ರಿಂಟ್ ಕಲಾಕೃತಿಗಳಾಗಿವೆ. ಈ ಎಲ್ಲಾ ಚಿತ್ರಕಲೆಗಳು ಸಾಮಾಜಿಕ, ನೈಸರ್ಗಿಕ, ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಕುರಿತಾಗಿವೆ.
ಒಟ್ಟಾರೆ ಚಿತ್ರಕಲೆಗಳು ನೋಡುಗರನ್ನು ಆಕರ್ಷಿಸುತ್ತಿದ್ದು, ಇನ್ನೂ ಒಂದು ತಿಂಗಳ ಕಾಲ ಈ ಪ್ರದರ್ಶನ ನಡೆಯಲಿದೆ. ನೀವೂ ಕೂಡ ಒಮ್ಮೆ ಚಿತ್ರಕಲಾ ಪರಿಷತ್‌ಗೆ ಭೇಟಿ ನೀಡಿ ಈ ಕಲೆಗಳ ಅಂದವನ್ನು ಕಣ್ತುಂಬಿಕೊಳ್ಳಬಹುದು.