ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಕೊರೊನಾ ಕರ್ಫ್ಯೂ ಉಲ್ಲಂಘಿಸಿದ 6,062 ವಾಹನ ಜಪ್ತಿ: 85 ಎಫ್​​ಐಆರ್ ದಾಖಲು - ಕೊರೊನಾ ಸುದ್ದಿ

ಕೊರೊನಾ ಕರ್ಫ್ಯೂ ನಡುವೆಯೂ ನಿಯಮ ಉಲ್ಲಂಘಿಸಿ ರಸ್ತೆಗಿಳಿದಿದ್ದ ಸಾವಿರಾರು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈವರೆಗೆ ಒಟ್ಟು 6062 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊರೊನಾ ಕರ್ಫ್ಯೂ ಉಲ್ಲಂಘಿಸಿದ್ದ 6062 ವಾಹನ ಜಪ್ತಿ
ಕೊರೊನಾ ಕರ್ಫ್ಯೂ ಉಲ್ಲಂಘಿಸಿದ್ದ 6062 ವಾಹನ ಜಪ್ತಿ

By

Published : May 1, 2021, 3:16 PM IST

ಬೆಂಗಳೂರು: ರಾಜ್ಯದಲ್ಲಿ 14 ದಿನ ಕೊರೊನಾ ಕರ್ಫ್ಯೂ ಜಾರಿಯದಾಗಿನಿಂದ ಬೆಂಗಳೂರಿನಲ್ಲಿ ಇದುವರೆಗೂ ಒಟ್ಟು 6,062 ವಾಹನಗಳನ್ನು ಸೀಜ್ ಮಾಡಲಾಗಿದ್ದು, ಇದರಲ್ಲಿ 5,502 ದ್ವಿಚಕ್ರ ವಾಹನಗಳು, 264 ಆಟೋಗಳು, 296 ಕಾರುಗಳು ಸೇರಿವೆ ಎಂದು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಏಪ್ರಿಲ್ 24ರಂದು 1,142 ದ್ವಿಚಕ್ರ ವಾಹನ, 48 ತ್ರಿಚಕ್ರ ವಾಹನ, 75 ಕಾರುಗಳನ್ನೊಳಗೊಂಡು ಒಟ್ಟು 1,265 ವಾಹನಗಳನ್ನು ಜಪ್ತಿ ಪಡೆಯಲಾಗಿತ್ತು. 25ರಂದು 841 ದ್ವಿಚಕ್ರ ವಾಹನ, 20 ತ್ರಿಚಕ್ರ ವಾಹನ, 25 ಕಾರುಗಳು ಸೇರಿ ಒಟ್ಟು 886 ವಾಹನಗಳನ್ನು ಸೀಜ್ ಮಾಡಲಾಗಿದೆ.

ಹೀಗೆಯೇ 26ರಂದು 69 ದ್ವಿಚಕ್ರ ವಾಹನ, 3 ತ್ರಿಚಕ್ರ ವಾಹನ, 9 ಕಾರುಗಳು ಸೇರಿ ಒಟ್ಟು 81 ವಾಹನ. 27ರಂದು 75 ದ್ವಿಚಕ್ರ, 1 ತ್ರಿಚಕ್ರ, 5 ಕಾರು ಸೇರಿ ಒಟ್ಟು 81 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 28ರಂದು 395 ದ್ವಿಚಕ್ರ, 22 ತ್ರಿಚಕ್ರ, 17 ಕಾರುಗಳನ್ನು ಸೇರಿಸಿ ಒಟ್ಟು 434 ವಾಹನಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

ಎನ್​​​ಡಿಎಂಎ ಆ್ಯಕ್ಟ್ ಅಡಿಯಲ್ಲಿ ಒಟ್ಟು 85 ಪ್ರಕರಣಗಳು ದಾಖಲಾಗಿದ್ದು, 24ರಿಂದ 30ರವರೆಗೆ ಕ್ರಮವಾಗಿ 23, 16, 4, 1, 19, 6, 8 ಕೇಸ್​​ಗಳನ್ನು ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details