ಬೆಂಗಳೂರು:ನಗರದಲ್ಲಿಂದು ಕೋವಿಡ್ ಪಾಸಿಟಿವ್ ಪ್ರಕರಣ ಇದೇ ಮೊದಲು ಆರು ಸಾವಿರದ ಗಡಿ ಮೀರಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ನಗರದಲ್ಲಿ 6,034 ಪ್ರಕರಣಗಳು ದೃಢಪಟ್ಟಿವೆ.
ಬೆಂಗಳೂರಲ್ಲಿ 6 ಸಾವಿರ ಕೊರೊನಾ ಸೋಂಕು ಪ್ರಕರಣ ಪತ್ತೆ!
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾ ಸ್ಫೋಟ
ಈ ಪೈಕಿ ನಗರದ ಹೊರವಲಯದಲ್ಲಿ 700, ಪೂರ್ವ ವಲಯದಲ್ಲಿ 853, ಮಹದೇವಪುರ 688, ಬೊಮ್ಮನಹಳ್ಳಿ 563, ದಾಸರಹಳ್ಳಿ 185, ಆರ್ ಆರ್ ನಗರ 485, ದಕ್ಷಿಣದಲ್ಲಿ 916, ಪಶ್ಚಿಮದಲ್ಲಿ 856, ಯಲಹಂಕ 383, ಪೂರ್ವ ತಾಲೂಕು 48, ದಕ್ಷಿಣ ತಾಲೂಕು 110, ಉತ್ತರ ತಾಲೂಕಿನಲ್ಲಿ 92 ಪ್ರಕರಣ ಪತ್ತೆಯಾಗಿದೆ.