ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಈವರೆಗೆ 509 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​... ಜಿಲ್ಲಾಧಿಕಾರಿಗಳು ನಿರ್ವಹಿಸಬೇಕಾದ 7 ಚಟುವಟಿಕೆಗಳು ಯಾವುವು? - ರಾಜ್ಯದಲ್ಲಿ ಆಕ್ಟಿವ್ ಕೇಸ್​ಗಳು 600

ಇಂದು ಒಂದೇ ದಿನ 55 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1147ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 600 ಕೇಸ್​ಗಳ ಆ್ಯಕ್ಟಿವ್​ ಆಗಿವೆ. ಉಳಿದಂತೆ 509 ಮಂದಿ ಕೊರೊನಾದಿಂದ ಮುಕ್ತರಾಗಿದ್ದು, 37 ಮಂದಿ ಮಾಹಾಮಾರಿಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಹಾಗಾಗಿ ಆರೋಗ್ಯ ಇಲಾಖೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ವದರಿ ಸಲ್ಲಿಸಲು ಆದೇಶಿಸಿದೆ.

ರಾಜ್ಯದಲ್ಲಿ ಆಕ್ಟಿವ್ ಕೇಸ್​ಗಳು 600
600 Corona active cases in state

By

Published : May 17, 2020, 7:43 PM IST

ಬೆಂಗಳೂರು: ಕೊರೊನಾ ತನ್ನ ಅಬ್ಬರವನ್ನು ಮುಂದುವರೆಸಿದ್ದು, ಇಂದು ಒಂದೇ ದಿನ 55 ಪ್ರಕಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1147ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 600 ಕೇಸ್​ಗಳ ಆ್ಯಕ್ಟಿವ್​ ಪ್ರಕರಣಗಳಿವೆ. ಉಳಿದಂತೆ 509 ಮಂದಿ ಕೊರೊನಾದಿಂದ ಮುಕ್ತರಾಗಿದ್ದರೆ, 37 ಮಂದಿ ಮಾಹಾಮಾರಿಗೆ ಬಲಿಯಾಗಿದ್ದಾರೆ. 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಈವರೆಗೆ ಒಟ್ಟು 1,45,398 ಮಂದಿಯನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 1147 ಮಂದಿಗೆ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಹೋಂಕ್ವಾರಂಟೈನ್ ಎನ್ಫೋರ್ಸ್​ಮೆಂಟ್ ಸ್ವ್ಕಾಡ್​ನವರು ಸಾರ್ವಜನಿಕರಿಂದ ಬಂದ ದೂರಗಳ ಮೇರೆಗೆ 104 ವ್ಯಕ್ತಿಗಳನ್ನು ನಿಗದಿತ ಸಂಸ್ಥೆಗಳಲ್ಲಿ ಕ್ವಾರಂಟೈನ್ ಮಾಡಿದ್ದು, ಇದುವರೆಗೆ 2009 ಮಂದಿಯನ್ನು ಹೋಂ ಕ್ವಾರಂಟೈನ್​ನಿಂದ ಹೋಟೆಲ್ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಬಿಬಿಎಂಪಿಯ ಫೀವರ್ ಕ್ಲಿನಿಕ್​​ನಲ್ಲಿ 185 ಜನಕ್ಕೆ ಹಾಗೂ ರಾಜ್ಯದಲ್ಲಿರುವ 32 ಕ್ಲಿನಿಕ್​​ನಲ್ಲಿ 12,750 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ಈ ಸಮಯದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಿದೆ. ಹೀಗಾಗಿ ಈ ಕೆಳಗಿನ ಚಟುವಟಿಕೆಗಳ ಕುರಿತಂತೆ ಪ್ರತಿ ಸೋಮವಾರ ಮತ್ತು ಗುರುವಾರ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. 7 ದಿನಗಳ ಒಳಗೆ ಇನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಸಂಪೂರ್ಣ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.

ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕಾದ ಪ್ರಮುಖ 7 ಚಟುವಟಿಕೆಗಳು ಹೀಗಿವೆ:

  1. ಸಕಾರಾತ್ಮಕ ಕೋವಿಡ್ ವರದಿಯಾದ 24 ಗಂಟೆಗಳ ಒಳಗೆ ಎಲ್ಲಾ ಸಂಪರ್ಕಿತರ ಮಾಹಿತಿಯಲ್ಲಿ ಆ್ಯಪ್​(CT App) ನಲ್ಲಿ ದಾಖಲಿಸುವುದು.
  2. ಕ್ವಾರಂಟೈನ್ ವಾಚ್ ಆ್ಯಪ್ (QW App) 3 ದಿನಗಳಲ್ಲಿ ಸಂಪೂರ್ಣವಾಗಿ ಕಾರ್ಯ ನಿರ್ವಹಣೆ ಮಾಡುವುದು. ಪ್ರತಿ ನಿರ್ಬಂಧಿತ ವ್ಯಕ್ತಿಯ ಬಗ್ಗೆ ನಾಮನಿರ್ದೇಶಿತ (QW) ಅಧಿಕಾರಿ ದೈನಂದಿನ ವರದಿ ಮನೆಯ ಸ್ಥಳದಿಂದ ಬರುವಂತೆ ಮಾಡುವುದು. ಉಲ್ಲಂಘನೆಯ ಎಲ್ಲಾ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುವುದು.
  3. ಮೇ 16ರಿಂದ ಪ್ರಾರಂಭವಾಗುವಂತೆ ಪ್ರತಿ ನಿರ್ಬಂಧಿತ ವಲಯ (Containment Zone) ಪ್ರಾರಂಭಿಕ ಮಾಹಿತಿ ಸಂಗ್ರಹಣೆ ಮತ್ತು ದೈನಂದಿನ ಆರೋಗ್ಯ ತಪಾಸಣೆಗೆ ಕಂಟೈನ್​ಮೆಂಟ್ ಝೋನ್​ ಆ್ಯಪ್ (CZ App) ಸಾಧನವಾಗಿರಬೇಕು.
  4. ಆರೋಗ್ಯ, ಅಪಾಯ ಮತ್ತು ಸಂಪೂರ್ಣ ಸಮೀಕ್ಷೆ (Household risk & outreach survey) ಮತ್ತು ಅಂಕಿ ಅಂಶಗಳ ಮಾಹಿತಿ ದಾಖಲಿಸುವುದನ್ನು ಮೇ 24 ರೊಳಗೆ ಪೂರ್ಣಗೊಳಿಸುವುದು.
  5. ಎಲ್ಲಾ ಅಂತಾರಾಜ್ಯದಿಂದ ಹಿಂದಿರುಗಿದವ (ರರೈಲುಗಳಲ್ಲಿ ಬರುವವರಿಗೆ ಸೇರಿದಂತೆ) ದಾಖಲೆಯನ್ನು ಸಂಪರ್ಕ ಪತ್ತೆ ಹಚ್ಚುವ ಆ್ಯಪ್(CT App) ನಲ್ಲಿ ಆಗಬೇಕು. ಗಡಿ ಸ್ವೀಕರಿಸುವ ಕೇಂದ್ರಗಳಲ್ಲಿ (BRC) ಮತ್ತು ಜಿಲ್ಲಾ ಸ್ವೀಕರಿಸುವ ಕೇಂದ್ರಗಳಲ್ಲಿ (DRC) ಸೇವಾ ಸಿಂಧು ಪೋರ್ಟಲ್​​ನಲ್ಲಿ ಪೂರ್ಣ ಪ್ರಕ್ರಿಯೆ ಹರಿವಿನೊಂದಿಗೆ ಹೆಚ್ಚು ಪರಿಣಾಮಕಾರಿ ವ್ಯವಸ್ಥೆ ಮುಂದಿನ ದಿನಗಳಲ್ಲಿ ಸಿದ್ಧವಾಗಲಿದೆ. ಇತರೆ ರಾಜ್ಯ ಅಥವಾ ವಿದೇಶದಿಂದ ಹಿಂದಿರುಗಿದರು ಕರ್ನಾಟಕಕ್ಕೆ ಪ್ರವೇಶಿಸುವಾಗ ವ್ಯವಸ್ಥೆಯಲ್ಲಿ (ಸಂಪರ್ಕ ಪತ್ತೆ ಹಚ್ಚುವ ಆ್ಯಪ್ ಅಥವಾ ಸೇವಾ ಸಿಂಧು ಪೋರ್ಟಲ್) ದಾಖಲೆಯಾಗದೆ ಉಳಿಯಬಾರದು. ಜೊತೆಗೆ ಕೈ ಮೇಲೆ ಮುದ್ರೆ ಇಲ್ಲದ ಚಲಿಸಲು ಅವಕಾಶ ನೀಡಬಾರದು. ಸರ್ಕಾರವು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಇಂತಹ ಎಲ್ಲಾ ವ್ಯಕ್ತಿಗಳ ಕ್ವಾರಂಟೈನ್ ಖಚಿತಪಡಿಸಿಕೊಳ್ಳುವುದು.
  6. ವೆಬ್ ಅಪ್ಲಿಕೇಶನ್‌ನಲ್ಲಿ ILI/SARI ಪ್ರಕರಣಗಳನ್ನು ವರದಿ ಮಾಡುವ ಖಾಸಗಿ ಸಂಸ್ಥೆಗಳ ಸಂಖ್ಯೆ ಮೇ 24 ರೊಳಗೆ ಒಟ್ಟು ಸಂಸ್ಥೆಗಳ ಕನಿಷ್ಠ 75% ಪ್ರಮಾಣ ತಲುಪಬೇಕು. ಸರ್ಕಾರಿ ಆಸ್ಪತ್ರೆಗಳು (ಕೋವಿಡ್ ಆಸ್ಪತ್ರೆಗಳನ್ನು ಹೊರತುಪಡಿಸಿ) ಮತ್ತು ಆರೋಗ್ಯ ಕೇಂದ್ರಗಳನ್ನು ಸಹ ಅದೇ ವ್ಯವಸ್ಥೆಯ ವ್ಯಾಪ್ತಿಗೆ ತರುವುದು.
  7. ಸಾಮಾಜಿಕ ಅಂತರವನ್ನು ಜಾರಿಗೊಳಿಸಲು ವಿಡಿಯೋಗ್ರಫಿ ಮೂಲಕ ಸಾರ್ವಜನಿಕ ಸ್ಥಳಗಳ ಸರ್ವೇಕ್ಷಣೆಯನ್ನು ಪ್ರತಿದಿನ ಮಾಡುವುದು.

ABOUT THE AUTHOR

...view details