ಸಿಡಿ ಲೇಡಿಗೆ ಬಂದೋಬಸ್ತ್ ಕಾರ್ಯ ನಿರ್ವಹಿಸಿದ್ದ ಪೊಲೀಸರಲ್ಲಿ ಕಾಣಿಸಿಕೊಂಡ ಕೊರೊನಾ! - 60 ಪೊಲೀಸ್ ಸಿಬ್ಬಂದಿಗೆ ಕೊರೊನಾ ದೃಢ
12:07 April 08
ಸಿಡಿ ಲೇಡಿ ಕೋರ್ಟ್ಗೆ ಹಾಜರಾಗಿದ್ದ ಸಂದರ್ಭದಲ್ಲಿ ಬಂದೋಬಸ್ತ್ ಕಾರ್ಯ ನಿರ್ವಹಿಸಿದ ಇನ್ಸ್ಪೆಕ್ಟರ್ ಮತ್ತು ಎಎಸ್ಐಗೆ ಕೊರೊನಾ ದೃಢಪಟ್ಟಿದೆ.
ಬೆಂಗಳೂರು:ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿಯಲ್ಲಿಯೂ ಕೊರೊನಾ ಸೋಂಕು ಕಾಣಿಸಲಾರಂಭಿಸಿದೆ. ನಗರದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಸೇರಿ ಇಬ್ಬರಿಗೆ ಸೋಂಕು ಇರುವುದು ದೃಢವಾಗಿದೆ.
ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಚಂದ್ರಾಲೇಔಟ್ನ 53 ಅಧಿಕಾರಿ ಹಾಗೂ ಸಿಬ್ಬಂದಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು. ಈ ಪೈಕಿ ಇನ್ ಸ್ಪೆಕ್ಟರ್ ಹಾಗೂ ಎಎಸ್ಐಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.
ಪಾಸಿಟಿವ್ ಕಂಡು ಬರುತ್ತಿದ್ದಂತೆ ಇಬ್ಬರಿಗೂ ಒಂದು ವಾರ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೂ ಕೊರೊನಾ ಪರೀಕ್ಷೆಗೆ ಒಳಪಡುವಂತೆ ಹೇಳಲಾಗಿದೆ. ಕೆಲ ದಿನಗಳ ಹಿಂದೆ ಸಿಡಿ ಲೇಡಿ ಕೋರ್ಟ್ಗೆ ಆಗಮಿಸಿದ್ದ ವೇಳೆ ಪೊಲೀಸರು ಬಂದೋಬಸ್ತ್ ಕಾರ್ಯ ನಿರ್ವಹಿಸಿದ್ದರು.