ದೇವನಹಳ್ಳಿ(ಬೆಂಗಳೂರು) : ಬ್ಯಾಕಾಂಕ್ನಿಂದ ಬೆಂಗಳೂರಿಗೆ ಅಕ್ರಮವಾಗಿ ತರಲಾಗಿದ್ದ 60 ಜೀವಂತ ನಕ್ಷತ್ರ ಆಮೆಗಳನ್ನು ರಕ್ಷಣೆ ಮಾಡಿರುವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು, ರಕ್ಷಣೆ ಮಾಡಿದ ನಕ್ಷತ್ರ ಆಮೆಗಳನ್ನ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿದೆ.
ಬೆಂಗಳೂರು ಏರ್‌ಪೋರ್ಟ್‌ನಲ್ಲಿ 60 ಜೀವಂತ ನಕ್ಷತ್ರ ಆಮೆಗಳ ಜಪ್ತಿ - ಈಟಿವಿ ಭಾರತ್ ಕನ್ನಡ
ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಸಾಗಿಸಿರುವುದನ್ನು ಗಮನಿಸಿದ ಬೆಂಗಳೂರು ಕಸ್ಟಮ್ ಅಧಿಕಾರಿಗಳು ಆಮೆಗಳನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜೀವಂತ ನಕ್ಷತ್ರ ಆಮೆಗಳ ಜಪ್ತಿ
ಆಗಸ್ಟ್ 27 ರಂದು ಬ್ಯಾಂಕಾಕ್ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ ಆತನ ಬ್ಯಾಗೇಜ್ನಲ್ಲಿ 60 ಜೀವಂತ ನಕ್ಷತ್ರ ಆಮೆಗಳು ಪತ್ತೆಯಾಗಿವೆ. ತಕ್ಷಣವೇ ನಕ್ಷತ್ರ ಆಮೆಗಳ ರಕ್ಷಣೆ ಮಾಡಿದ ಅಧಿಕಾರಿಗಳು ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಆರೋಪಿಯನ್ನ ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ:ಅತ್ಯಾಚಾರ ಸಂತ್ರಸ್ತೆ ತಾಯಿ ಮೇಲೆ ರೇಪ್ ಎಸೆಗಿದ ಯುಪಿ ಪೊಲೀಸ್ ಬಂಧನ
Last Updated : Aug 30, 2022, 12:25 PM IST