ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಪೊಲೀಸರ ಬೆನ್ನುಬಿಡದ ಕೊರೊನಾ: ಮತ್ತೆ 6 ಪೊಲೀಸ್​ ಠಾಣೆಗಳು ಸೀಲ್ ಡೌನ್ - ಬೆಂಗಳೂರು ಕೊರೊನಾ ಸುದ್ದಿ

ಬೆಂಗಳೂರು ಪೊಲೀಸರಲ್ಲಿ ಕೊರೊನಾ ಕೇಸ್​ಗಳು ಹೆಚ್ಚಾಗುತ್ತಿವೆ. ನಗರದಲ್ಲಿ ಮತ್ತೆ ಆರು ಪೊಲೀಸ್​ ಠಾಣೆಗಳನ್ನು ಸೀಲ್​​ ಡೌನ್​ ಮಾಡಲಾಗಿದೆ.

6 ಪೊಲೀಸ್​ ಠಾಣೆ ಸೀಲ್ ಡೌನ್
6 ಪೊಲೀಸ್​ ಠಾಣೆ ಸೀಲ್ ಡೌನ್

By

Published : Jul 10, 2020, 12:48 PM IST

ಬೆಂಗಳೂರು:ನಗರದಲ್ಲಿಕೊರೊನಾ ಅಟ್ಟಹಾಸ ಮತ್ತೆ ಮುಂದುವರೆದಿದೆ.‌ ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಣೆ ಮಾಡಿದ್ದ ಪೊಲೀಸರಲ್ಲಿ ಮತ್ತೆ ಕೊರೊನಾ‌ ಸೋಂಕು ಉಲ್ಬಣವಾಗುತ್ತಿದೆ.

ವಿಧಾನಸೌಧ ಠಾಣೆ ಸೀಲ್​ ಡೌನ್:ವಿಧಾನಸೌಧ ಠಾಣೆಯ ಓರ್ವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ವಿಧಾನಸೌಧ ಸೇರಿದಂತೆ ಹಲವೆಡೆ ಭದ್ರತೆಗೆ ಕಾನ್ಸ್‌ಟೇಬಲ್ ನಿರ್ವಹಣೆ ಮಾಡಿದ್ದು, ಈ ವೇಳೆ ಸೋಂಕು ‌ತಗುಲಿರುವ ಅನುಮಾನ ಇದೆ. ‌ಸದ್ಯ ಠಾಣೆಯಲ್ಲಿ ಸೋಂಕಿತನ ಸಂಪರ್ಕದಲ್ಲಿರುವವರನ್ನ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇತರೆ ಸಿಬ್ಬಂದಿ ಭಯದಲ್ಲೇ ಕರ್ತವ್ಯ ನಿಭಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯಶವಂತಪುರ ಠಾಣೆ ಸೀಲ್ ಡೌನ್: ಯಶವಂತಪುರ ಠಾಣೆಯ ಕಾನ್ಸ್‌ಟೇಬಲ್ ಓರ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರು ಕೋರ್ಟ್ ಪಿಸಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಸದ್ಯ ನ್ಯಾಯಾಲಯಕ್ಕೆ ರಜೆ ಇರುವ ಕಾರಣ ಯಶವಂತಪುರ ಠಾಣಾ ಸುತ್ತ ಓಡಾಡಿದ್ದರು. ಇವರ ಪತ್ನಿ ಕೂಡ ಅಬಕಾರಿ ಇಲಾಖೆಯಲ್ಲಿ ಸಬ್ ಇನ್​​ಸ್ಪೆಕ್ಟರ್​ ಆಗಿ‌ ಕಾರ್ಯ ನಿರ್ವಹಿಸುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್ ಮಾಡಲಾಗಿದೆ.

ಇದರ‌ ಜೊತೆಗೆ ರಾಜಗೋಪಾಲ ನಗರ ಠಾಣೆಯ ಒಬ್ಬ ಸಿಬ್ಬಂದಿ, ಮಲ್ಲೇಶ್ವರಂ ಠಾಣೆಯ ಇಬ್ಬರು ಸಿಬ್ಬಂದಿ, ನಂದಿನಿ‌ ಲೇಔಟ್ ಠಾಣೆಯ ಒಬ್ಬ ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಒಟ್ಟು ಇಲ್ಲಿಯವರೆಗೆ 454 ಸಿಬ್ಬಂದಿಯಲ್ಲಿ‌ ಸೋಂಕು ಪತ್ತೆಯಾಗಿದೆ. 21 ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ABOUT THE AUTHOR

...view details