ಬೆಂಗಳೂರು:ಇಲಾಖೆಯ ಆರು ಮಂದಿಡಿವೈಎಸ್ಪಿಗಳನ್ನ ವರ್ಗಾವಣೆಗೊಳಿಸಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಆರು ಮಂದಿ ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಡಿಜಿ ಆದೇಶ - ಬೆಂಗಳೂರು ಇತ್ತೀಚಿನ ಸುದ್ದಿ
ಆರು ಮಂದಿ ಡಿವೈಎಸ್ಪಿಗಳನ್ನ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳದಿಂದ ಶರಣಪ್ಪ ಎಂಬವರು ಸಂಚಾರ ಉಪವಿಭಾಗ ಬೆಳಗಾವಿ ನಗರಕ್ಕೆ, ಎನ್ ನವೀನ್ ಕುಮಾರ್ ಎಂಬವರು ಕೆಪಿಎ ಮೈಸೂರು ವರ್ಗಾವಣೆ ಮಾಡುವುದದಾಗಿ ಈ ಹಿಂದೆ ಆದೇಶದಲ್ಲಿತ್ತಾದರೂ ಇದೀಗ ನಾಗಮಂಗಲ ಉಪ ವಿಭಾಗ ಮಂಡ್ಯ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಕೆ. ಕೃಷ್ಣಮೂರ್ತಿ ಎಂಬವರನ್ನು ರಾಜ್ಯ ಗುಪ್ತಚರ ವಿಭಾಗದಿಂದ ಭದ್ರಾವತಿ ಉಪವಿಭಾಗ ಶಿವಮೊಗ್ಗ ಜಿಲ್ಲೆಗೆ, ಮಹಾಂತೇಶ್ವರ ಎಸ್. ಜಿದ್ದಿ ಅವರನ್ನು ಪಿ.ಟಿ. ಎಸ್ ಖಾನಾಪೂರಕ್ಕೆ ವರ್ಗಾವಣೆ ಮಾಡುವುದಾಗಿ ಆದೇಶ ನೀಡಿತ್ತಾದರೂ ಇದೀಗ ಭ್ರಷ್ಟಾಚಾರ ನಿಗ್ರಹ ದಳಕ್ಕೆ, ಕೆ.ಬಿ ವಿಶ್ವನಾಥ್ ನಾಗಮಂಗಲ ಉಪವಿಭಾಗ ಮಂಡ್ಯ ಜಿಲ್ಲೆಯಿಂದ ಕರ್ನಾಟಕ ಪೊಲೀಸ್ ಅಕಾಡೆಮಿ, ಹಾಗೂ ಸುಧಾಕರ್ ಸದಾನಂದ ನಾಯಕ್ ಮುಂದಿನ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ತವ್ಯಕ್ಕೆ ಸೇರುವಂತೆ ಆದೇಶ ನೀಡಲಾಗಿದೆ.
ವರ್ಗಾವಣೆಗೊಂಡ ಸಿಬ್ಬಂದಿ ತಕ್ಷಣದಿಂದಲೇ ನಿಗದಿಂತ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.