ದೇಶದಲ್ಲಿ ಕರ್ನಾಟಕದ 6 ಜಿಲ್ಲೆ ಡೇಂಜರ್.. ಲಾಕ್ಡೌನ್ ನಡುವೆಯೂ ಏರಿಕೆ ಕಂಡ ಪಾಸಿಟಿವಿಟಿ ಪ್ರಮಾಣ.. - ಕೊಡಗು ಕೊರೊನಾ
ದೇಶದಲ್ಲಿ ಲಾಕ್ಡೌನ್ ಜಾರಿಯಾದ ಮೇಲೂ ಸಹ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸೋಂಕಿನ ಪ್ರಮಾಣದಲ್ಲಿಯೂ ಏರಿಕೆಯಾಗುತ್ತಿದ್ದು, ದೇಶದ 52 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಏರಿಕೆ ಕಂಡಿದೆ. ಇದರಲ್ಲಿ ರಾಜ್ಯದ 6 ಜಿಲ್ಲೆಗಳು ಸಹ ಇದ್ದು ಆತಂಕಕ್ಕೆ ಕಾರಣವಾಗಿದೆ.
ದೇಶದಲ್ಲಿ ಕರ್ನಾಟಕದ 6 ಜಿಲ್ಲೆಗಳು ಡೇಂಜರ್
By
Published : May 19, 2021, 3:06 PM IST
|
Updated : May 19, 2021, 4:28 PM IST
ಬೆಂಗಳೂರು : ರಾಜ್ಯ ಸೇರಿದಂತೆ ದೇಶಾದ್ಯಂತ ಕೊರೊನಾ ಸೋಂಕು ಕಡಿಮೆ ಆಗುವ ಲಕ್ಷಣ ಕಾಣ್ತಿಲ್ಲ. ಈ ನಡುವೆ ಕೋವಿಡ್ ನಿಯಂತ್ರಣಕ್ಕೆ ಲಾಕ್ಡೌನ್ ಅಸ್ತ್ರ ಪ್ರಯೋಗ ಮಾಡಿದರೂ ಯಾವುದೇ ಪ್ರಯೋಜನ ಆದಂತೆ ಕಾಣಿಸುತ್ತಿಲ್ಲ.
ಇದಕ್ಕೆ ಸಾಕ್ಷಿ ಎಂಬಂತೆ ದೇಶದ 52 ಜಿಲ್ಲೆಗಳು ಡೇಂಜರ್ ಝೋನ್ನಲ್ಲಿವೆ. 52 ಜಿಲ್ಲೆಗಳಲ್ಲಿ ಶೇ.100ಕ್ಕಿಂತ ಹೆಚ್ಚಿನ ಕೇಸ್ ನಿರಂತರ ಉಲ್ಬಣವಾಗ್ತಿವೆ.
ಏಪ್ರಿಲ್ 14ರಿಂದ ಈವರೆಗೂ ಈ 52 ಜಿಲ್ಲೆಗಳಲ್ಲಿ ಕೇಸ್ಗಳು ಏರಿಕೆಯಾಗುತ್ತಿವೆ. ಸೋಂಕು ಉಲ್ಬಣದಲ್ಲಿ ದೇಶದ ಮಹಾನಗರಗಳನ್ನೇ ಹಿಂದಿಕ್ಕಿ ರಾಜ್ಯದ 6 ಜಿಲ್ಲೆಗಳು ಮುನ್ನುಗ್ತಿವೆ. ಆದರಲ್ಲೂ ದೇಶದ ಎಲ್ಲಾ ಜಿಲ್ಲೆಗಳ ಪೈಕಿ ಪಾಸಿಟಿವ್ ಕೇಸ್ಗಳ ಪಟ್ಟಿಯ 3ನೇ ಸ್ಥಾನದಲ್ಲಿ ರಾಜ್ಯದ ಕೊಡಗು ಜಿಲ್ಲೆ ಇದೆ.
ದೇಶದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಏರಿಕೆಯಾಗುತ್ತಿರುವ ಜಿಲ್ಲೆಗಳು
ಮೊದಲ ಸ್ಥಾನದಲ್ಲಿ ಗುಜರಾತ್ನ ತಾಪಿ ಜಿಲ್ಲೆ ಇದ್ದರೆ, 2ನೇ ಸ್ಥಾನದಲ್ಲಿ ಪಂಜಾಬ್ನ ಮಾನ್ಸಾ ಜಿಲ್ಲೆ ಇದೆ. ಪಾಸಿಟಿವ್ ಪ್ರಕರಣಗಳ ನಿರಂತರ ಬೆಳವಣಿಗೆ ದರದಲ್ಲಿ ಗುಜರಾತ್ 198%, ಪಂಜಾಬ್ನ ಮಾನ್ಸಾ 192% ಹಾಗೂ ಕರ್ನಾಟಕದ ಕೊಡಗು 184% ಕೇಸ್ ವೃದ್ದಿ ದರ ಹೊಂದಿವೆ. ಒಂದು ತಿಂಗಳ ಅವಧಿಯಲ್ಲಿ ಶೇ.100ಕ್ಕೂ ಹೆಚ್ಚು ಪ್ರಮಾಣದಲ್ಲಿ ಕೊರೊನಾ ಕೇಸ್ ಉಲ್ಬಣಗೊಂಡಿವೆ.
ಕರ್ನಾಟಕ 6 ಜಿಲ್ಲೆಗಳು ಯಾವುದು?
ಜಿಲ್ಲೆ
ಏ. 14
ಮೇ 5
ಮೇ 12
28 ದಿನ (%)
ಕೊಡಗು
613
14,034
18,798
184
ತುಮಕೂರು
29,516
55,671
72,573
146%
ಕೋಲಾರ
11,445
21,644
27,038
136%
ಮಂಡ್ಯ
21,268
37,037
46,347
118%
ರಾಮನಗರ
7,913
13,134
15,971
102%
ಚಾ.ನಗರ
7,552
13,742
18,326
143%
ಭಾರತದ ಎಲ್ಲಾ ಜಿಲ್ಲೆಗಳ ನಡುವೆ ಕಳೆದ ಒಂದು ತಿಂಗಳ ಅವಧಿಯ ಅಂಕಿ-ಅಂಶ ಇದಾಗಿದೆ. ಶೇ.100ರಷ್ಟು ಹೆಚ್ಚು ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳ ಏರಿಕೆಯನ್ನು ಕಂಡಿರುವ ಕರ್ನಾಟಕದ 6 ಜಿಲ್ಲೆಗಳು ಇರುವುದು ಆತಂಕಕಾರಿ ವಿಷಯವಾಗಿದೆ.
2 ಲಕ್ಷದ ಸನಿಹದಲ್ಲಿದ್ದ ಟೆಸ್ಟಿಂಗ್ ಇದೀಗ 90 ಸಾವಿರಕ್ಕೆ ಇಳಿಕೆ
ಇತ್ತ ಕೊರೊನಾ ಕಂಟ್ರೋಲ್ಗೆ ಬರ್ತಿದೆ ಅನ್ನುತ್ತಿರುವ ಸಚಿವರು, ಕೊರೊನಾ ಟೆಸ್ಟಿಂಗ್ ಪ್ರಮಾಣವನ್ನ ಕಡಿಮೆ ಮಾಡಿದ್ದಾರೆ. ನಿತ್ಯ 2 ಲಕ್ಷ ಸನಿಹದಷ್ಟು ಮಂದಿಗೆ ಕೋವಿಡ್ ಟೆಸ್ಟ್ ಮಾಡುತ್ತಿದ್ದರು, ಇದೀಗ 90 ಸಾವಿರಕ್ಕೆ ಇಳಿದಿದೆ.