ಬೆಂಗಳೂರು:ಯಶವಂತಪುರ ಪೀಪಲ್ ಟ್ರೀ ಆಸ್ಪತ್ರೆ ಆರೋಗ್ಯವಂತ ಹೃದಯ ಕಾಪಾಡಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ '5 ಕೆ ವಾಕ್ ಫಾರ್ ಹೆಲ್ದಿ ಹಾರ್ಟ್" ವಾಕಥಾನ್ ಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಪ್ಯಾರಾ ಅಥ್ಲಿಟ್ ಕೆ.ವೈ ವೆಂಕಟೇಶ್ ಚಾಲನೆ ನೀಡಿದರು.
ಮತ್ತಿಕೆರೆಯ ಜೆ.ಪಿ ಪಾರ್ಕ್‌ನಿಂದ ಪ್ರಾರಂಭವಾದ ವಾಕಥಾನ್ ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು, ಆಸ್ಪತ್ರೆಯ ಸಿಬ್ಬಂದಿ, ಜನರು ಪಾಲ್ಗೊಂಡು ಆರೋಗ್ಯವಂತ ಹೃದಯಕ್ಕಾಗಿ ಜಾಗೃತಿ ಮೂಡಿಸುವ ಭಿತ್ತಿಚಿತ್ರಗಳನ್ನು ಪ್ರದರ್ಶಿಸುತ್ತಾ " ನಡೆಯಿರಿ ನಡೆಯಿರಿ ಹೃದಯಾಘಾತ ತಡೆಯಿರಿ" ಎಂಬ ಜನಪ್ರಿಯ ಘೋಷಣೆಯನ್ನು ಉಚ್ಚರಿಸಿ ಗೊರಗುಂಟೆ ಪಾಳ್ಯದ ಪೀಪಲ್ ಟ್ರಿ ಆಸ್ಪತ್ರೆಯಲ್ಲಿ ಜಾಗೃತಿ ಜಾಥಾ ಅಂತ್ಯಗೊಂಡಿತು.
ಈ ವಾಕಥಾನ್ ನಲ್ಲಿ ಇಂಡಿಯನ್ ಅಥ್ಲೆಟಿಕ್ ಲೋಕೇಶ್, ಖ್ಯಾತ ಕ್ರಿಕೆಟ್ ಆಟಗಾರರಾದ ಶ್ರೇಯಸ್ ಗೋಪಾಲ್, ದೇವದತ್ ಪಡಿಕ್ಕಲ್, ಇರ್ಫಾನ್ ಸಾಯತ್, ಅನಿರುದ್ ಕುಲಕರ್ಣಿ, ಲಯನ್ಸ್ ಕ್ಲಬ್‌ನ ಡಿಸ್ಟಿಕ್ಸ್ ಗೌರ್ನರ್ ಡಾ. ಜಿ.ಎ.ರಮೇಶ್, ರೋಟರಿ ಕ್ಲಬ್, ಆಸರೆ ಸಂಸ್ಥೆಗಳು ಸೇರಿದಂತೆ ಸುಮಾರು 50 ಕ್ಕೂ ಸಂಘದ ಅಧ್ಯಕ್ಷರು ಭಾಗವಹಿಸಿದ್ದರು.
ಓದಿ : ಪರೀಕ್ಷೆ ಬರೆಯಲು 1,200 ಕಿ.ಮೀ. ದೂರ ಪ್ರಯಾಣ: ಹೆಂಡತಿಗೆ ಡಿ.ಎಡ್ ಪರೀಕ್ಷೆ, ಗಂಡನಿಗೆ ಅಗ್ನಿ ಪರೀಕ್ಷೆ!
ವಾಕಥಾನ್ ಗೆ ಚಾಲನೆ ನೀಡಿ ಮಾತನಾಡಿದ ಪ್ಯಾರಾ ಅಥ್ಲಿಟ್ ಕೆ.ವೈ. ವೆಂಕಟೇಶ್, ಆರೋಗ್ಯವಂತ ಹೃದಯ ಕಾಪಾಡಿಕೊಳ್ಳಲು ಎಲ್ಲರೂ ವ್ಯಾಯಾಮ, ವಾಕಿಂಗ್ ಮಾಡುವುದು ಉತ್ತಮ. ಪೀಪಲ್ ಟ್ರೀ ಆಸ್ಪತ್ರೆ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿದೆ, ಹೃದಯ ಜಾಗೃತಿಗಾಗಿ ವಾಕಥಾನ್ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು. ಆರೋಗ್ಯವಂತ ಹೃದಯಕ್ಕಾಗಿ ದಿನನಿತ್ಯ ಲವಲವಿಕೆಯಿಂದಿರುವುದು, ಉತ್ತಮ ವ್ಯಾಯಾಮ ಮಾಡುವುದು ಹಾಗೂ ಪ್ರತಿ ನಿತ್ಯ 30 ನಿಮಿಷಗಳ ಕಾಲ ವೇಗದ ನಡಿಗೆ ಮಾಡುವುದು ಒಳ್ಳೆಯದು ಎಂದು ಪೀಪಲ್ ಟ್ರೀ ಆಸ್ಪತ್ರೆ ಕಾರ್ಯನಿರ್ವಣಾಧಿಕಾರಿ ಡಾ. ಜ್ಯೋತಿ ನೀರಜ್ ಹೇಳಿದರು.