ಕರ್ನಾಟಕ

karnataka

ETV Bharat / state

ಐಎಂಎ ದೋಖಾ ಪ್ರಕರಣ: 5880 ಗೋಲ್ಡ್ ಬಿಸ್ಕೀಟ್ಸ್​​ನ್ನು ವಂಚಕ ಇಟ್ಟಿದ್ದೆಲ್ಲಿ ಗೊತ್ತಾ? - ರಿಚ್ ಮಂಡ್ ಟೌನ್ ಬಳಿಯಿರುವ ಅಪಾರ್ಟ್ ಮೆಂಟ್

ಬಹುಕೋಟಿ ವಂಚನೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಸಂಸ್ಥೆಗೆ ಸೇರಿದ ಗೋಲ್ಡ್ ಬಿಸ್ಕೀಟ್​​ಗಳನ್ನ ಜಪ್ತಿ ಮಾಡುವಲ್ಲಿ ಎಸ್ಐಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಐಎಂಎ ದೋಖಾ ಪ್ರಕರಣ

By

Published : Aug 7, 2019, 7:14 PM IST

Updated : Aug 7, 2019, 9:44 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಸಂಸ್ಥೆಗೆ ಸೇರಿದ ಗೋಲ್ಡ್ ಬಿಸ್ಕೀಟ್​​ಗಳನ್ನ ಜಪ್ತಿ ಮಾಡುವಲ್ಲಿ ಎಸ್ಐಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಸ್ಐಟಿ ವಶದಲ್ಲಿರುವ ಮನ್ಸೂರ್​ ತನಿಖೆ ವೇಳೆ ಎಲ್ಲೆಲ್ಲಿ ಆಭರಣಗಳನ್ನ ಬಚ್ಚಿಟ್ಟಿದ್ದ ಅನ್ನೋದರ ಮಾಹಿತಿಯನ್ನ ಈ ಹಿಂದೆ ಬಾಯ್ಬಿಟ್ಟಿದ್ದ. ಅದರಲ್ಲೂ ಐಎಂಎ ಸಂಸ್ಥೆಗೆ ಸೇರಿರುವ ರಿಚ್​ಮಂಡ್ ಟೌನ್ ಬಳಿಯಿರುವ ಅಪಾರ್ಟ್​ಮೆಂಟ್​​ನಲ್ಲಿ ಸುಮಾರು ಮೂರು ಸಾವಿರ ಕೋಟಿ ಬೆಲೆ ಬಾಳುವ 5880 ಗೋಲ್ಡ್ ಬಿಸ್ಕೀಟ್​ಗಳನ್ನ ಮನ್ಸೂರ್ ಆಪ್ತ ನಿಜಾಮುದ್ದೀನ್ ಬಚ್ಚಿಟ್ಟಿರುವ ವಿಚಾರವನ್ನು ಕೂಡ ತಿಳಿಸಿದ್ದ ಎನ್ನಲಾಗ್ತಿದೆ.

5880 ಗೋಲ್ಡ್ ಬಿಸ್ಕೀಟ್ಸ್​ ಸೀಜ್..

ಹೀಗಾಗಿ ಎಸ್ಐಟಿ ರಿಚ್​ಮಂಡ್ ಟೌನ್ ಬಳಿ ಇರುವ ಅಪಾರ್ಟ್​ಮೆಂಟ್​​ ಮೇಲೆ ದಾಳಿ ಮಾಡಿ ಬಿಲ್ಡಿಂಗ್ ಮೇಲಿರುವ ಸ್ವಿಮ್ಮಿಂಗ್ ಪೂಲ್​​ನ ವಾಟರ್ ಪಂಪ್ ಒಳಗಡೆ ಇಟ್ಟಿದ್ದ ಬಿಸ್ಕೀಟ್​​ಗಳನ್ನ ಸೀಜ್ ಮಾಡಿದ್ದಾರೆ.

ಇನ್ನು, ಈ ಬಿಸ್ಕೀಟ್ಸ್​​ ನಕಲಿನಾ..? ಅಸಲಿನಾ...? ಅನ್ನೋದರ ಬಗ್ಗೆ ಎಸ್ಐಟಿ ತನಿಖೆ ಮುಂದುವರಿಸಿದೆ. ಮನ್ಸೂರ್ ಮತ್ತು ನಿಜಾಮುದ್ದೀನ್ ಜನರಿಗೆ ಈ ಬಿಸ್ಕೀಟ್ಸ್​​ ತೋರಿಸಿ ಸೆಳೆಯುತ್ತಿದ್ರು. ಗೋಲ್ಡ್​​ ಬಿಸ್ಕೀಟ್​​ಗಳನ್ನು ಯಾಕಾಗಿ ಅಲ್ಲಿಟ್ಟಿದ್ರು. ಈ ಬಿಸ್ಕೀಟ್ಸ್​​ ಅಸಲಿಯತ್ತು ಏನು ಎಂಬುದು ತನಿಖೆಯಿಂದ ಹೊರಬರಬೇಕಿದೆ.

Last Updated : Aug 7, 2019, 9:44 PM IST

ABOUT THE AUTHOR

...view details