ಕರ್ನಾಟಕ

karnataka

By

Published : Oct 21, 2020, 9:02 PM IST

ETV Bharat / state

ರಾಜ್ಯದಲ್ಲಿ ಕಂಟ್ರೋಲ್​​​ ಆಗ್ತಿದೆಯಾ ಕೊರೊನಾ?: ಇಂದು 5,872 ಪಾಸಿಟಿವ್​, 88 ಬಲಿ

88 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 10,696ಕ್ಕೆ ಏರಿಕೆಯಾಗಿದೆ. 856 ಪ್ರಯಾಣಿಕರು ವಿಮಾನಯಾನ ಮೂಲಕ ರಾಜ್ಯಕ್ಕೆ ಬಂದಿದ್ದು, ಇವರಲ್ಲರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಕಳೆದ 7 ದಿನಗಳಲ್ಲಿ 87,356 ಮಂದಿ ಹೋಂ ಕ್ವಾರೆಂಟೈನ್​ನಲ್ಲಿ ಇದ್ದಾರೆ.

corona
ಕೊರೊನಾ

ಬೆಂಗಳೂರು:ರಾಜ್ಯದಲ್ಲಿಂದು 5,872 ಜನರಿಗೆ ಸೋಂಕು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 7,82,773ಕ್ಕೆ ಏರಿಕೆಯಾಗಿದೆ.‌

ಇಂದು 9,289 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ ರಾಜ್ಯದಲ್ಲಿ 6,71,618 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 1,00,440 ಸಕ್ರಿಯ ಪ್ರಕರಣಗಳಿದ್ದು, 947 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

88 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 10,696ಕ್ಕೆ ಏರಿಕೆಯಾಗಿದೆ. 856 ಪ್ರಯಾಣಿಕರು ವಿಮಾನಯಾನದ ಮೂಲಕ ರಾಜ್ಯಕ್ಕೆ ಬಂದಿದ್ದು ಇವರೆಲ್ಲರನ್ನೂ ತಪಾಸಣೆ ಮಾಡಲಾಗಿದೆ. ಕಳೆದ 7 ದಿನಗಳಲ್ಲಿ 87,356 ಮಂದಿ ಹೋಂ ಕ್ವಾರೆಂಟೈನ್​ನಲ್ಲಿ ಇದ್ದಾರೆ.

ಬೆಂಗಳೂರಿನಲ್ಲಿ 2,717 ಕೊರೊನಾ ಪಾಸಿಟಿವ್, 53 ಮಂದಿ ಸಾವು

ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಇಳಿಕೆಯಾಗಿದೆ. ಇಂದು 2,717 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತರ ಒಟ್ಟು ಸಂಖ್ಯೆ 3,15,559ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ ಏರಿಕೆಯಾಗಿದ್ದು, 53 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 3,631ಕ್ಕೆ ಏರಿದೆ.

ನಗರದಲ್ಲಿ ಈವರೆಗೂ 2,48,584 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 63,343ಕ್ಕೆ ಇದೆ. ಒಟ್ಟು 378 ಮಂದಿ ಐಸಿಯುನಲ್ಲಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details