ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ಕಳೆದ ಐದು ತಿಂಗಳಿನಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ ವಾಹನ ಸವಾರರಿಗೆ ದಂಡದ ಬಿಸಿ ಮುಟ್ಟಿಸಿರುವ ನಗರ ಸಂಚಾರ ಪೊಲೀಸ್ ಇಲಾಖೆಯು 58.92 ಕೋಟಿ ರೂ. ದಂಡ ವಸೂಲಿ ಮಾಡಿದೆ. ಲಾಕ್ಡೌನ್ಗೂ ಮುನ್ನ ಸಂಚಾರಿ ನಿಯಮ ಉಲ್ಲಂಘಿಸಿದ್ದ ಸವಾರರ ಮೇಲೆ ದಂಡ ಹಾಕಿ ವಸೂಲಿ ಮಾಡಿದ್ದ ಸಂಚಾರಿ ಪೊಲೀಸರು, ಲಾಕ್ಡೌನ್ನಲ್ಲಿ ಭೌತಿಕವಾಗಿ ಸವಾರರನ್ನು ತಡೆಯದೇ ಆನ್ಲೈನ್ ಮುಖಾಂತರ ದಂಡ ಪಾವತಿಸಿಕೊಂಡಿದ್ದು, ಮೇ 31ರವರೆಗೆ 58.92 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆ ನಗರದಲ್ಲಿ ಅಪಘಾತ ಪ್ರಕರಣ ಗಣನೀಯವಾಗಿ ಇಳಿಕೆಯಾಗಿವೆ. ಮೇ ತಿಂಗಳಲ್ಲಿ 27 ಮಂದಿ ಸಾವನ್ನಪ್ಪಿದ್ದು, 125 ಕೇಸ್ ದಾಖಲಾಗಿವೆ. ಲಾಕ್ಡೌನ್ ಅವಧಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ವಾಹನ ಸವಾರರ ಮೇಲೆ, ಡಿಜಿಟಲ್ ವ್ಯವಸ್ಥೆಯಾದ ಫೀಲ್ಡ್ ಟ್ರಾಫಿಕ್ ವೈಲೇಷನ್ ಡಿವೈಸ್ಗಳ ಮೂಲಕ ದಂಡ ವಿಧಿಸಲಾಗುತ್ತಿದೆ. ಈ ಡಿವೈಸ್ನಲ್ಲಿ ಸಂಚಾರಿ ಉಲ್ಲಂಘನೆಯ ಒಂದು ಫೋಟೋ ಕ್ಲಿಕ್ ಮಾಡಿದರೆ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ ಕಚೇರಿಗೆ ತಲುಪಲಿದೆ. ಇದರಂತೆ ವಿಳಾಸ ಸಮೇತ ಬೈಕ್ ಸವಾರನಿಗೆ ದಂಡ ಬೀಳುತ್ತೆ.
ಇದನ್ನೂ ಓದಿ:ಪೆಟ್ರೋಲ್ GSTಗೆ ಸೇರಿಸುವುದು ಪರಿಹಾರವಲ್ಲ, ಅದು ಶೋಷಣೆ: ಹೆಚ್ಡಿಕೆ