ಬೆಂಗಳೂರು:ನಗರದ ಬೀದಿ ಬೀದಿಗಳಲ್ಲಿ ಎಲ್ಲೆಂದರಲ್ಲಿ ನೆಲೆಸಿದ್ದ 57 ಭಿಕ್ಷುಕರನ್ನ ಪೊಲೀಸರು ನಿರಾಶ್ರಿತ ಕೇಂದ್ರಕ್ಕೆ ರವಾನಿಸಿದ್ದಾರೆ. ನಗರದ ಎಲ್ಲೆಂದರಲ್ಲಿ ಭಿಕ್ಷುಕರನ್ನ ಕಾಣುತ್ತೇವೆ. ಅದರಲ್ಲೂ ಇವರು ಹೆಚ್ಚಾಗಿ ಕಾಣಿಸಿಕೊಳ್ಳುವುದು ಸಿಗ್ನಲ್‌ಗಳ ಬಳಿ. ರಾತ್ರಿ ಆದರೆ ಸಾಕು ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದೇವಸ್ಥಾನ ಅಥವಾ ಫುಟ್ಪಾತ್ಗಳಲ್ಲಿ ಅವರು ಮಲಗುತ್ತಿದ್ದರು.
ಇಂತಹ ಜಾಗದಲ್ಲಿ ಭಿಕ್ಷೆ ಬೇಡುತ್ತಿದ್ದವರಿಗೆ ಆಶ್ರಯ ನೀಡಲು ನಗರ ಪೊಲೀಸರು ಪಣ ತೊಟ್ಟಿದ್ದರು. ನಗರದ ಹೃದಯ ಭಾಗವಾದ ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ, ಪಶ್ಚಿಮ ವಿಭಾಗದ ಉಪ್ಪಾರಪೇಟೆ, ಕೆ. ಆರ್ ಮಾರುಕಟ್ಟೆ, ಬ್ಯಾಟರಾಯನಪುರ, ಚಂದ್ರಾಲೇಔಟ್, ಕೆಂಗೇರಿ ಹಾಗೂ ವಿಜಯನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಭಿಕ್ಷುಕರನ್ನ ನಿರಾಶ್ರಿತ ಕೇಂದ್ರಕ್ಕೆ ರವಾನಿಸಿದ್ದಾರೆ.