ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವ ಸಮಾರಂಭ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನೆರವೇರಿತು.. ಕೋವಿಡ್ ಬಳಿಕ ಮೊದಲ ಭೌತಿಕ ಘಟಿಕೋತ್ಸವ ಇದಾಗಿದ್ದು, ಬೇರೆ ಬೇರೆ ವಿವಿಗಳಲ್ಲಿ ವರ್ಚುಯಲ್ ಮೂಲಕ ಘಟಿಕೋತ್ಸವ ನಡೆಸಲಾಗಿತ್ತು.
ಎಫರ್ಟ್ ಇದ್ದರೆ ಸಾಲದು ಜ್ಞಾನದ ಅವಶ್ಯಕತೆ ಇದೆ: ಬೆಂಗಳೂರು ವಿವಿ ಘಟಿಕೋತ್ಸವದಂದು ಇಸ್ರೋ ಡಾ. ಕೆ ಶಿವನ್ ಕಿವಿಮಾತು - gold medal winning rank student from banglore university
ಬೆಂಗಳೂರು ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದ ಇಸ್ರೋ ಅಧ್ಯಕ್ಷ ಡಾ. ಕೆ ಶಿವನ್ ಭವಿಷ್ಯದಲ್ಲಿ ದೇಶಕ್ಕೆ ಎದುರಾಗುವ ಸವಾಲುಗಳನ್ನು ಎದುರಿಸುವ ಮುನ್ನ ದೇಶದ ನಿಜವಾದ ಸವಾಲು ಯಾವುದೆಂದು ಅರಿಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇಂದಿನ ಕಾರ್ಯಕ್ರಮಕ್ಕೆ ಇಸ್ರೋ ಅಧ್ಯಕ್ಷ ಡಾ.ಕೆ ಶಿವನ್ ಭಾಗಿಯಾಗಿದ್ದರು. ಇದೇ ವೇಳೆ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಐಐಎಸ್ ಸಿಯ ಶಿಕ್ಷಣ ದಿನಗಳನ್ನ ಮೆಲುಕು ಹಾಕಿದ್ರು. ಬೆಂಗಳೂರಿನಲ್ಲಿ ನಾನು ದಿ ಬೆಸ್ಟ್ ದಿನಗಳನ್ನು ಕಳೆದಿದ್ದೇನೆ.. ನಿಮ್ಮ ಬೆರಗು ಕಣ್ಣುಗಳಲ್ಲಿ ನಾನು ನನ್ನನ್ನು ನೋಡುತ್ತಿದ್ದೇನೆ. ದೇಶದ ಅಭಿವೃದ್ಧಿಗೆ ನಿಮ್ಮಂತಹ ನೂರಾರು ಶಕ್ತಿಗಳ ಅವಶ್ಯಕತೆ ಇದೆ.. ದೇಶದ ಅಭಿವೃದ್ಧಿಗೆ ಕೇವಲ ಎಫರ್ಟ್ ಇದ್ದರೆ ಸಾಲದು ಜ್ಞಾನದ ಅವಶ್ಯಕತೆ ಇದೆ.. ಮೂರು ದಶಕಗಳ ಹಿಂದೆ ಜಾಬ್ ಸಿನಾರಿಯೋಗೆ ಇಷ್ಟು ಅವಕಾಶಗಳಿರಲಿಲ್ಲ, ಪ್ರಸುತ್ತ ಸಾಕಷ್ಟು ಅವಕಾಶಗಳಿವೆ.. ಜೀವನ ಮತ್ತು ಉದ್ಯೋಗ ವಿಚಾರ ಆಯ್ಕೆಯಲ್ಲ ಬದಲಿಗೆ ಆಯ್ಕೆಯಲ್ಲಿ ಪ್ರಮುಖವಾದದ್ದನ್ನು ಪಡೆಯುವುದು ಅಂತ ತಿಳಿಸಿದರು. ಜೀವನದಲ್ಲಿ ನೀವು ಬಯಸಿದ್ದು ಸಿಗಲಿಲ್ಲ ಅಂದ್ರೆ ನಿರಾಶೆಗೊಳ್ಳದಿರಿ, ಯಾಕಂದ್ರೆ ನೀವ್ ಅಂದುಕೊಂಡಿದ್ದಕ್ಕಿಂತ ಬಹು ದೊಡ್ಡದು ನಿಮಗೆ ಲಭಿಸಲಿದೆ.. ಭವಿಷ್ಯದಲ್ಲಿ ದೇಶಕ್ಕೆ ಎದುರಾಗುವ ಸವಾಲುಗಳನ್ನು ಎದುರಿಸುವ ಮುನ್ನ ದೇಶದ ನಿಜವಾದ ಸವಾಲು ಯಾವುದೆಂದು ಅರಿಯಿರಿ ಅಂತ ಸಲಹೆ ನೀಡಿದರು.
ಬೆಂಗಳೂರು ವಿವಿಯ 55ನೇ ಘಟಿಕೋತ್ಸವದಲ್ಲಿ ವಿವಿಧ ವಿಷಯಗಳಲ್ಲಿ 56,172 ಅಭ್ಯರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು, 319 ಚಿನ್ನದ ಪದಕಗಳು 90 ನಗದು ಬಹುಮಾನಗಳಿಗೆ ಒಟ್ಟು 196 ವಿದ್ಯಾರ್ಥಿಗಳು ಭಾಜನರಾಗಿದ್ದಾರೆ. ವಿವಿಧ ವಿಷಯಗಳಲ್ಲಿ ಒಟ್ಟು 184 ಪಿಹೆಚ್ಡಿ ಪದವಿಗಳನ್ನು ಪ್ರದಾನ ಮಾಡಲಾಗಿದೆ. ಪ್ರಥಮ ರ್ಯಾಂಕ್ ಪಡೆದಂತ 82 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಯ್ತು.
ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವ ಚಿನ್ನದ ಪದಕವೂ 18 ಕ್ಯಾರೆಟ್ ಬಂಗಾರವುಳ್ಳ 1.3 ಗ್ರಾಂ ತೂಕದ ಪದಕವು 20 ಗ್ರಾಂ ಬೆಳ್ಳಿಯ ಬಿಲ್ಲೆಯ ಮೇಲೆ ಮೂಡಿಸಲಾಗಿದ್ದು, ಒಟ್ಟು 21.3 ಗ್ರಾಂ ತೂಕವುಳ್ಳದ್ದಾಗಿದೆ.
ಅತಿ ಹೆಚ್ಚು ಚಿನ್ನದ ಪದಕ/ನಗದು ಪಡೆದವರು:
ಎ.ಎಸ್. ಕಷ್ಯಪ್ ವಾಸುದೇವನ್- ಬಿಇ
ನರೇಶ್ ಕೆ ಎಸ್ - ಎಂಎಸ್ಸಿ
ರಹಮತುನ್ನಿಸ್ಸಾ- ಬಿಕಾಂ ಪದವಿ
ಮೇಘನಾಥನ್ ಕೆ ಎಸ್ - ಬಿಇ
ಅರತ್ರಿಕ ರೇ- ಎಂಎಸ್ಸಿ
ಚರಣ್ ರಾಜ್ ಟಿ ಎಸ್ - ಎಂಎ
ಮಹಾಲಕ್ಷ್ಮಿ ಎಂ ಆರ್ - ಬಿಎ ಪದವಿ
ರುಕ್ಸಾನಾ ಎಂ - ಬಿಎಸ್ಸಿ ಪದವಿ
ಸುಶ್ಮಿತಾ ಎ - ಎಲ್ಎಲ್ಬಿ
ಎಂ ಕಾವ್ಯ- ಎಂಎ ಕನ್ನಡ
ಸ್ಪೂರ್ತಿ ಗೋಪಾಲ ಕೊಂಡ್ಲಿ- ಬಿ.ಇಡಿ
ಮಹತಿ ಭಟ್ ಬಿ- ಬಿಎಸ್ಸಿ ಪದವಿ
ಚಿನ್ಮಯಿ ಬಿ ಪಿ - ಬಿಇ