ಬೆಂಗಳೂರು:ಇಲ್ಲಿನಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಸಮಾರಂಭವನ್ನು ನವೆಂಬರ್ 28ರಂದು ಬೆಳಗ್ಗೆ 11 ಗಂಟೆಗೆ ಜಿಕೆವಿಕೆ ಆವರಣದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಶೈಕ್ಷಣಿಕ ವರ್ಷ 2018-19ರಲ್ಲಿ ತೇರ್ಗಡೆಯಾದ ಒಟ್ಟು 986 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ. ಅದರಲ್ಲಿ 638 ವಿದ್ಯಾರ್ಥಿಗಳು ವಿವಿಧ ಸ್ನಾತಕ ಪದವಿ, 280 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ 68 ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ.
ವಿಭಾಗವಾರು ಚಿನ್ನದ ಪದಕಗಳು
ಕೃಷಿ ವಿಶ್ವವಿದ್ಯಾನಿಲಯ ನೀಡುವ 11 ಚಿನ್ನದ ಪದಕಗಳು, 9 ದಾನಿಗಳ ಚಿನ್ನದ ಪದಕಗಳು ಹಾಗೂ 3 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣಪತ್ರಗಳನ್ನು ಒಳಗೊಂಡಿವೆ. ವಿದ್ಯಾರ್ಥಿನಿಯರು–8, ವಿದ್ಯಾರ್ಥಿಗಳು–4.
ಕೃಷಿ ವಿವಿ ನೀಡುವ 20 ಚಿನ್ನದ ಪದಕಗಳು ಹಾಗೂ 5 ಆವರಣದ ಚಿನ್ನದ ಪದಕಗಳು, 29 ದಾನಿಗಳ ಚಿನ್ನದ ಪದಕಗಳು ಹಾಗೂ 12 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣಪತ್ರಗಳು. ವಿದ್ಯಾರ್ಥಿನಿಯರು–25, ವಿದ್ಯಾರ್ಥಿಗಳು–6.
ವಿವಿ ನೀಡುವ 6 ಚಿನ್ನದ ಪದಕಗಳು, 3 ಆವರಣದ ಚಿನ್ನದ ಪದಕಗಳು, 37 ದಾನಿಗಳ ಚಿನ್ನದ ಪದಕಗಳು, 1 ವಿವಿ ಕ್ರೀಡಾ ಚಿನ್ನದ ಪದಕ ಹಾಗೂ 7 ದಾನಿಗಳ ಚಿನ್ನದ ಪದಕ ಪ್ರಶಸ್ತಿಪ್ರಮಾಣ ಪತ್ರಗಳು. ವಿದ್ಯಾರ್ಥಿನಿಯರು–8, ವಿದ್ಯಾರ್ಥಿಗಳು–8.
- ಒಟ್ಟು ಚಿನ್ನದ ಪದಕಗಳು-143
- ಚಿನ್ನದ ಪದಕಗಳು - 121
- ದಾನಿಗಳ ಚಿನ್ನದ ಪದಕ ಪ್ರಮಾಣಪತ್ರ – 22
- ವಿದ್ಯಾರ್ಥಿನಿಯರು – 41 (ಚಿನ್ನದ ಪದಕ–72, ದಾನಿಗಳ ಚಿನ್ನದ ಪ್ರಮಾಣ ಪತ್ರ–12
- ವಿದ್ಯಾರ್ಥಿಗಳು –18 (ಚಿನ್ನದ ಪದಕ–49, ದಾನಿಗಳ ಚಿನ್ನದ ಪ್ರಮಾಣಪತ್ರ–10)