ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳು ಉಲ್ಭಣಿಸುತ್ತಿರುವ ಹಿನ್ನೆಲೆ ಬಿಬಿಎಂಪಿ ವಲಯವಾರು ವ್ಯಾಪ್ತಿಯಲ್ಲಿ 10 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆದಿದೆ.
ಬೆಂಗಳೂರು ನಗರದಾದ್ಯಂತ 546 ಕೋವಿಡ್ ರೋಗಿಗಳು ಸಿಸಿಸಿ ಕೇಂದ್ರದಲ್ಲಿ ದಾಖಲು - ಕೋವಿಡ್ ಆರೈಕೆ ಕೇಂದ್ರ
ರೋಗಲಕ್ಷಣಗಳು ಇಲ್ಲದ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಮತ್ತು ಮನೆಯಲ್ಲಿ ಪ್ರತ್ಯೇಕ ವಾಸಕ್ಕೆ ಅನುಕೂಲವಿಲ್ಲದ ಸೋಂಕಿತರಿಗೆ ಬಿಬಿಎಂಪಿ ವಲಯವಾರು ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಕೇಂದ್ರಗಳಲ್ಲಿ ಇದುವರೆಗೆ 546 ಮಂದಿ ಕೋವಿಡ್ ಸೋಂಕಿತರು ಆರೈಕೆ ಪಡೆಯುತ್ತಿದ್ದಾರೆ.
ರೋಗಲಕ್ಷಣಗಳು ಇಲ್ಲದ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಮತ್ತು ಮನೆಯಲ್ಲಿ ಪ್ರತ್ಯೇಕ ವಾಸಕ್ಕೆ ಅನುಕೂಲವಿಲ್ಲದ ಸೋಂಕಿತರಿಗೆ ವಲಯವಾರು ಒಟ್ಟು 12 ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ 10 ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಿ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂ(CHBMS)ನಲ್ಲಿ ಹಾಸಿಗೆಗಳ ಮಾಹಿತಿ ಅಳವಡಿಸಲಾಗಿದೆ.
10 ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಒಟ್ಟು 1,601 ಹಾಸಿಗೆಗಳ ಸಾಮರ್ಥ್ಯವಿದೆ. ಈ ಪೈಕಿ ಇದುವರೆಗೆ 546 ಮಂದಿ ಕೋವಿಡ್ ಸೋಂಕಿತರು ಆರೈಕೆ ಪಡೆಯುತ್ತಿದ್ದು, 1,055 ಹಾಸಿಗೆಗಳು ಖಾಲಿಯಿವೆ. ಉಳಿದ 2 ಕೋವಿಡ್ ಆರೈಕೆ ಕೇಂದ್ರಗಳನ್ನು ನಾಳೆಯಿಂದ ಪ್ರಾರಂಭಿಸಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.