ಬೆಂಗಳೂರು: ಸುಮಾರು 54 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ದ್ವಿಚಕ್ರ ವಾಹನ ಮಾಲೀಕ ಪೂರ್ವ ವಿಭಾಗದ ಹಲಸೂರು ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದ್ಯಾಮಪ್ಪ ನೇತೃತ್ವದ ತಂಡದ ಕೈಗೆ ಸಿಕ್ಕಿಬಿದ್ದಿದ್ದು, ಅವನಷ್ಟೇ ಉದ್ದದ ರಸೀದಿ ನೀಡಿ ರೂ. 29,500 ದಂಡ ವಸೂಲಿ ಮಾಡಿದ್ದಾರೆ.
54 ಬಾರಿ ಸಂಚಾರಿ ನಿಯಮ ಉಲ್ಲಂಘನೆ
ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸ್ ಉಲ್ಲಂಘನೆ ಹೀಗೆ ಹತ್ತು ಹಲವು ಪ್ರಕರಣ ವಾಹನ ಸವಾರನ ಮೇಲೆ ದಾಖಲಾಗಿತ್ತು. ಬೈಕ್ ಜಪ್ತಿ ಮಾಡಿ ಸವಾರನಿಗೆ ಸಂಚಾರದ ಅರಿವು ತರಬೇತಿ ಪಡೆಯಲು ಕಳುಹಿಸಲಾಗಿದೆ. 10ಕ್ಕೂ ಹೆಚ್ಚು ಬಾರಿ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದರೆ ಅಂತಹ ವಾಹನ ಚಾಲಕರನ್ನು ಸಂಚಾರಿ ನಿಯಮಗಳ ಅರಿವು ತರಬೇತಿಗೆ ಕಳುಹಿಸಲಾಗುತ್ತದೆ. ತರಬೇತಿ ಪಡೆದು ಪ್ರಮಾಣಪತ್ರ ತೆಗೆದುಕೊಂಡ ಬಳಿಕವಷ್ಟೇ ವಾಹನ ಹಿಂತಿರುಗಿಸಲಾಗುತ್ತದೆ.
ಓದಿ:ಕೊರೊನಾದಿಂದ ಗುಣಮುಖರಾದ ಅಲೋಕ್ ಕುಮಾರ್: ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡ ಮಗಳು
ಈ ಬಗ್ಗೆ ಟ್ವೀಟ್ ಮೂಲಕ ಸಂಚಾರ ವಿಭಾಗದ ಡಿಸಿಪಿ ನಾರಾಯಣ್ ಕೂಡ ಮಾಹಿತಿ ಹಂಚಿಕೊಂಡಿದ್ದು, ವಾಹನ ಸವಾರರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದ್ದಾರೆ.