ಬೆಂಗಳೂರು: ರಾಜ್ಯದ ಪ್ರವಾಹದಿಂದ ಈವರೆಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಇನ್ನು ಸುಮಾರು 15 ಮಂದಿ ಪ್ರವಾಹದಿಂದ ನಾಪತ್ತೆಯಾಗಿದ್ದಾರೆ. ಆ.13ರಂದು ಉತ್ತರ ಕರ್ನಾಟಕ, ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ತಗ್ಗಿದೆ. ಆದರೆ, ಮಳೆಯ ಅಬ್ಬರಕ್ಕೆ ಗುಡ್ಡ ಕುಸಿತ ಉಂಟಾಗಿ ಪ್ರಾಣ ಹಾನಿ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಬೆಳಗಾವಿಯಲ್ಲಿ 13, ಕೊಡಗಿನಲ್ಲಿ 9, ಚಿಕ್ಕಮಗಳೂರಿನಲ್ಲಿ 7, ಉತ್ತರ ಕನ್ನಡ 4 ಹಾಗೂ ಶಿವಮೊಗ್ಗ, ಉಡುಪಿ, ಬಾಗಲಕೋಟೆಯಲ್ಲಿ ತಲಾ 3, ಮೈಸೂರು, ಧಾರವಾಡ ತಲಾ 4 ಜನರು ಸಾವಿಗೀಡಾಗಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ನೆರೆ ಪ್ರಮಾಣ ಇಳಿಕೆಯಾಗಿದೆ. ಇತ್ತ ಆಲಮಟ್ಟಿ ಜಲಾಶಯ ಸೇರಿದಂತೆ ಪ್ರಮುಖ ಜಲಾಶಯಗಳಿಂದ ಹೊರ ಬಿಡುವ ನೀರಿನ ಪ್ರಮಾಣವನ್ನೂ ಕಡಿಮೆಗೊಳಿಸಲಾಗಿದೆ. ಕೃಷ್ಣ ಮೇಲ್ದಂಡೆ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಮುಂದಿನ ನಾಲ್ಕೈದು ದಿನ ಸಾಧಾರಣ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವರುಣಾಘಾತಕ್ಕೆ ಸಂಭವಿಸಿದ ಹಾನಿ ವಿವರ:
ಒಟ್ಟು ಸಂಭವಿಸಿದ ಸಾವು 54
ನಾಪತ್ತೆಯಾದವರ ಸಂಖ್ಯೆ 15
ಜಾನುವರುಗಳ ಸಾವು 852
ಒಟ್ಟು ರಕ್ಷಿಸಲ್ಪಟ್ಟ ಸಂತ್ರಸ್ತರು 6,97,398
ಜಾನುವಾರುಗಳ ರಕ್ಷಣೆ 51,460
ಪ್ರವಾಹ ಪೀಡಿತ ಜಿಲ್ಲೆ 21
ಪ್ರವಾಹ ಪೀಡಿತ ತಾಲೂಕು 100
ಒಟ್ಟು ಬೆಳೆ ಹಾನಿ 4.45 ಲಕ್ಷ ಹೆಕ್ಟೇರ್
ಒಟ್ಟು ಮನೆಗಳ ಹಾನಿ 55,325