ಬೆಂಗಳೂರು :ರಾಜ್ಯದಲ್ಲಿಂದು 531 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,42,031ಕ್ಕೆ ಏರಿಕೆ ಆಗಿದೆ. ಮೂವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,233ಕ್ಕೆ ಏರಿದೆ.
ರಾಜ್ಯದಲ್ಲಿಂದು 531 ಮಂದಿಗೆ ಸೋಂಕು ದೃಢ : ಮೂವರು ಬಲಿ - ಬೆಂಗಳೂರು ಕೊರೊನಾ
ಸೋಂಕಿತ ಪ್ರಕರಣಗಳ ಶೇಕಡವಾರು 0.71ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.56ರಷ್ಟು ಇದೆ..
ರಾಜ್ಯದಲ್ಲಿಂದು 531 ಮಂದಿಗೆ ಸೋಂಕು ದೃಢ: ಮೂವರು ಸೋಂಕಿಗೆ ಬಲಿ
434 ಮಂದಿ ಗುಣಮುಖರಾಗಿದ್ದು,9,23,811 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 5,968 ಇದ್ದು, 144 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತ ಪ್ರಕರಣಗಳ ಶೇಕಡವಾರು 0.71ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.56ರಷ್ಟು ಇದೆ.
ಇದನ್ನೂ ಓದಿ:ಸಾಂಸ್ಕೃತಿಕ ನಗರಿಯಲ್ಲಿ ಅದ್ಧೂರಿಯಾಗಿ ಜರುಗಿದ ಗೆಡ್ಡೆ ಗೆಣಸು ಮೇಳ