ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 528 ಜನರಿಗೆ ಸೋಂಕು ದೃಢ; 3 ಮಂದಿ ಬಲಿ - karnataka corona news 2021

ರಾಜ್ಯದಲ್ಲಿಂದು ಕೊರೊನಾ ವೈರಸ್​ನಿಂದ 3 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 12,346 ಕ್ಕೆ ಏರಿದೆ.‌ 413 ಮಂದಿ ಗುಣಮುಖರಾಗಿದ್ದು, 9,34,143 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.

corona
ಕೊರೊನಾ

By

Published : Mar 3, 2021, 8:19 PM IST

ಬೆಂಗಳೂರು: ರಾಜ್ಯದಲ್ಲಿಂದು 528 ಮಂದಿಗೆ ಕೊರೊನಾ ವೈರಸ್​ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,52,565 ಕ್ಕೆ ಏರಿಕೆ ಆಗಿದೆ.

3 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 12,346 ಕ್ಕೆ ಏರಿದೆ.‌ 413 ಮಂದಿ ಗುಣಮುಖರಾಗಿದ್ದು, 9,34,143 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 6057 ಇದ್ದು, 116 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಸೋಂಕಿತರ ಪ್ರಕರಣಗಳ ಶೇಕಡವಾರು 0.77 ರಷ್ಟು ಇದ್ದರೆ, ಮೃತ ಪಟ್ಟವರ ಪ್ರಮಾಣ ಶೇ 0.56 ರಷ್ಟು ಇದೆ.

ಯುಕೆಯಿಂದ 200 ಪ್ರಯಾಣಿಕರು ಆಗಮಿಸಿದ್ದು, ಈವರೆಗೆ 64 ಜನಕ್ಕೆ ಪಾಸಿಟಿವ್ ಬಂದಿದೆ. ಸೋಂಕಿತರ ಸಂಪರ್ಕದಲ್ಲಿರುವ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದ್ದು,‌ 25 ಜನರಿಗೆ ರೂಪಾಂತರ ಕೊರೊನಾ ಹರಡಿದೆ.‌

ಓದಿ:ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ರಾಜೀನಾಮೆ‌ ಅಂಗೀಕರಿಸಿದ ರಾಜ್ಯಪಾಲರು

ಕೋವಿಡ್ 2.0 ಲಸಿಕಾಭಿಯಾನ:ರಾಜ್ಯಾದ್ಯಂತ ಕೊರೊನಾ ಲಸಿಕಾ ಅಭಿಯಾನ 2.0ರ 3ನೇ ದಿನವಾದ ಇಂದು 9903 ಹಿರಿಯ ನಾಗರಿಕರು, 1350 ಮಂದಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸೇರಿ ಈವರೆಗೆ 15,294 ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.‌ ಇನ್ನು ಮೊದಲ ಡೋಸ್​ನ ಆರೋಗ್ಯ ಕಾರ್ಯಕರ್ತರಿಂದು 767, 2ನೇ ಡೋಸ್ 2082, ಮುಂಚೂಣಿ ಕಾರ್ಯಕರ್ತರು 1191 ಮಂದಿ ಲಸಿಕೆ ಪಡೆದಿದ್ದು, ಒಟ್ಟಾರೆಯಾಗಿ 10,046 ಮಂದಿ ಲಸಿಕೆ ಪಡೆದುಕೊಂಡಂತಾಗಿದೆ.

ABOUT THE AUTHOR

...view details