ಬೆಂಗಳೂರು: ರಾಜ್ಯದಲ್ಲಿಂದು 522 ಮಂದಿಗೆ ಕೋವಿಡ್-19 ವೈರಸ್ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,39,387ಕ್ಕೆ ಏರಿಕೆ ಆಗಿದೆ.
4 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 12,217ಕ್ಕೆ ಏರಿದೆ. ಇಂದು ರಾಜ್ಯದಲ್ಲಿ 465 ಮಂದಿ ಗುಣಮುಖರಾಗಿದ್ದು, 9,21,122 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 6029 ಇದ್ದು, 145 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತ ಪ್ರಕರಣಗಳ ಶೇಕಡವಾರು 0.69ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.7ರಷ್ಟು ಇದೆ.