ಬೆಂಗಳೂರು: ಇಂದು ಒಂದೇ ದಿನ 52 ಸೋಂಕಿತರು ಮೃತಪಟ್ಟಿದ್ದು ಸಾವಿನ ಸಂಖ್ಯೆ 38,666 ರಷ್ಟಾಗಿದೆ. 1,55,054 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು 41,400 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 36,05,508 ಏರಿಕೆ ಆಗಿದೆ.
53,093 ಸೋಂಕಿತರು ಗುಣಮುಖರಾಗಿದ್ದು, ಈ ತನಕ 32,16,070 ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 3,50,742 ರಷ್ಟಿದೆ. ಇವತ್ತಿನ ಪಾಸಿಟಿವ್ ರೇಟು 26.70% ರಷ್ಟಿದ್ದರೆ ಡೆತ್ ರೇಟ್ 0.12% ರಷ್ಟಿದೆ. ಇನ್ನು ವಿಮಾನ ನಿಲ್ದಾಣದಲ್ಲಿ 833 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 404 ವಿದೇಶಿಗರು ಹೈ ರಿಸ್ಕ್ ದೇಶಗಳಿಂದ ಆಗಮಿಸಿದ್ದಾರೆ.