ಬೆಂಗಳೂರು :ವಿಧಾನಸೌಧದ ಬಳಿಯ ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿ 52 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ. ಒಟ್ಟು 300 ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಲಾಗಿತ್ತು.
ಸೋಂಕಿತ 52 ಸಿಬ್ಬಂದಿ ಹೋಂ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತ ಕೋವಿಡ್ ಹೆಚ್ಚಾದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಮೌಖಿಕ ಕಲಾಪಗಳನ್ನು ಎರಡು ವಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ 9 ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ
ರಾಜಧಾನಿಯಲ್ಲಿ ಕೊರೊನಾ ಏರಿಳಿತ :ಬೆಂಗಳೂರಲ್ಲಿ ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಪ್ರತಿನಿತ್ಯ ಏರಿಳಿಕೆಯಾಗುತ್ತಿದೆ. ರಾಜಧಾನಿಯಲ್ಲಿ ಗುರುವಾರ 30 ಸಾವಿರ ದಾಟಿದ್ದ ಸೋಂಕಿತರ ಸಂಖ್ಯೆ, ಶುಕ್ರವಾರ 26,794ಕ್ಕೆ ಇಳಿಕೆಯಾಗಿದೆ.
ಗುರುವಾರಕ್ಕಿಂತ ಶುಕ್ರವಾರ 4 ಸಾವಿರ ಪ್ರಕರಣ ಕಡಿಮೆಯಾದಂತಾಗಿದೆ. ಕೆಲವೇ ವಾರ್ಡ್ಗಳಿಗೆ ಸೀಮಿತವಾಗಿದ್ದ ಕೋವಿಡ್ ಇದೀಗ ಇಡೀ ನಗರವನ್ನು ಆವರಿಸಿದೆ. 198 ವಾರ್ಡ್ಗಳ ಪೈಕಿ 101 ವಾರ್ಡ್ಗಳಲ್ಲಿ ಅಪಾಯದ ಹಂತದಲ್ಲಿದೆ. 33 ವಾರ್ಡ್ಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರಕ್ಕೂ ಮೀರಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ