ಬೆಂಗಳೂರು: ನಗರದಲ್ಲಿ ಒಂದೇ ದಿನ 5,066 ಕೋವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 20ರ ವೇಳೆಗೆ ದಿನವೊಂದಕ್ಕೆ 6,500 ಕೇಸ್ಗಳನ್ನು ದಾಟಬಹುದು ಎಂದು ತಜ್ಞರ ಸಮಿತಿಅಂದಾಜಿಸಿದೆ.
ಬೆಂಗಳೂರಿಗೆ ಕೊರೊನಾಘಾತ: ಇಂದು 5,066 ಕೋವಿಡ್ ಕೇಸ್ ಪತ್ತೆ! - ಬೆಂಗಳೂರಿಗೆ ಕೊರೊನಾಘಾತ,
ರಾಜ್ಯ ರಾಜಧಾನಿ ಬೆಂಗಳೂರಿನ ಮೇಲೆ ಮಹಾಮಾರಿ ಕೊರೊನಾ ಕೆಂಗಣ್ಣು ಬೀರಿದೆ. ಒಂದೇ ದಿನ 5,066 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದು, ಜನರನ್ನು ಬೆಚ್ಚಿಬೀಳಿಸಿದೆ.
ಬೆಂಗಳೂರಿನಲ್ಲಿ ಕೊರೊನಾ
ಸದ್ಯ ಏಪ್ರಿಲ್ 7 ರ ವೇಳೆಗೆ 5 ಸಾವಿರ ಪ್ರಕರಣ ದಾಟಿರುವುದು ಆತಂಕ ಮೂಡಿಸಿದೆ. ಬೆಂಗಳೂರು ದಕ್ಷಿಣ ವಲಯದಲ್ಲೇ ಅತಿಹೆಚ್ಚು ಜನರಿಗೆ ಕೋವಿಡ್ ಹರಡಿದ್ದು, 983 ಪ್ರಕರಣಗಳು ಕಂಡುಬಂದಿವೆ. ಪೂರ್ವದಲ್ಲಿ 735, ಪಶ್ಚಿಮದಲ್ಲಿ 635, ಮಹದೇವಪುರ 606, ಆರ್ಆರ್ ನಗರ 389, ದಾಸರಹಳ್ಳಿ 120, ಬೊಮ್ಮನಹಳ್ಳಿಯಲ್ಲಿ 488 ಕೇಸ್ಗಳು ದೃಢಪಟ್ಟಿವೆ.
ಮಂಗಳವಾರವೂ ನಗರದಲ್ಲಿ 26 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 4,266 ಜನರಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ನಗರದಲ್ಲಿ ಒಟ್ಟು 119 ಕಂಟೈನ್ಮೆಂಟ್ ವಲಯಗಳಿವೆ. ಪಾಸಿಟಿವಿಟಿ ಪ್ರಮಾಣ 5.79% ಕ್ಕೆ ಏರಿಕೆಯಾಗಿದೆ.