ಕರ್ನಾಟಕ

karnataka

ETV Bharat / state

ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ ರೂ. ಮೀಸಲಿಟ್ಟ ಸಿಎಂ - ಕರ್ನಾಟಕ ರಾಜ್ಯ ಬಜೆಟ್​ 2020

ಸಿಎಂ ಬಿ. ಎಸ್​​. ಯಡಿಯೂರಪ್ಪ ಇಂದು ಮಂಡಿಸಿದ ಬಜೆಟ್​ನಲ್ಲಿ ಬಸವೇಶ್ವರರ 325 ಅಡಿ ಕಂಚಿನ ಪುತ್ಥಳಿ ನಿರ್ಮಾಣಕ್ಕೆ 20 ಕೋಟಿ ರೂ. ನೀಡಿದ್ದಾರೆ.

Anubhava mantapa
ಸಿಎಂ ಬಿ. ಎಸ್​​. ಯಡಿಯೂರಪ್ಪ

By

Published : Mar 5, 2020, 1:01 PM IST

ಬೆಂಗಳೂರು:ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲು 500 ಕೋಟಿ ರೂ. ಮೀಸಲಿಡಲಾಗಿದೆ.

ಚಿತ್ರದುರ್ಗದ ಮುರುಘಾಮಠದಲ್ಲಿ ಬಸವೇಶ್ವರರ 325 ಅಡಿ ಕಂಚಿನ ಪುತ್ಥಳಿ ನಿರ್ಮಾಣಕ್ಕೆ 20 ಕೋಟಿ ರೂ. ನೀಡಲಾಗಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠಕ್ಕೆ 1 ಕೋಟಿ ರೂ.ಮೀಸಲು.

ಬೆಂಗಳೂರಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ವಿವೇಕಾನಂದ ಯುವಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಬಿಎಸ್​​ವೈ ಘೋಷಿಸಿದ್ದಾರೆ. ಕ್ರೀಡೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ನೀಡಲಾಗಿದೆ.

ಅನಂತ ಕುಮಾರ್ ಪ್ರತಿಷ್ಠಾನ ಸ್ಥಾಪನೆಗೆ 20 ಕೋಟಿ ರೂ. ಮೀಸಲಿಡಲಾಗಿದೆ. ಅಮರಶಿಲ್ಪಿ ಜಕಣಾಚಾರಿ ಸ್ಮರಣಾ ದಿನಾಚರಣೆ ಆಚರಿಸಲು ಜ.1ರಂದು ನಿಗದಿ ಪಡಿಸಲಾಗಿದೆ. ರವೀಂದ್ರ ಕಲಾಕ್ಷೇತ್ರ ಮಾದರಿಯ ಕಟ್ಟಡಗಳನ್ನು ನಗರದ ನಾಲ್ಕು ಕಡೆ ಸ್ಥಾಪಿಸಲು 60 ಕೋಟಿ ರೂ. ಅನುದಾನ ನೀಡಲಾಗಿದೆ.

ABOUT THE AUTHOR

...view details