ಕರ್ನಾಟಕ

karnataka

By

Published : Nov 6, 2019, 11:59 PM IST

ETV Bharat / state

ಬಿಬಿಎಂಪಿ ಮತ್ತೆ ದಿವಾಳಿಯಾಗುವ ಭೀತಿ: 500 ಕೋಟಿ ಆಸ್ತಿ ತೆರಿಗೆ ಕೈಚೆಲ್ಲಿ ಕುಳಿತರಾ ಅಧಿಕಾರಿಗಳು?

ಬಿಬಿಎಂಪಿಗೆ ಐನೂರು ಕೋಟಿ ರೂಪಾಯಿ ತೆರಿಗೆ ಹರಿದು ಬರುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದ್ದು, ಅದರ ಬದಲು ಕೆಲ ಅಧಿಕಾರಿಗಳು, ವಲಯ ಆಯುಕ್ತರು ಕೈಬಿಸಿ ಮಾಡಿಕೊಳ್ಳಲು ಅನುಕೂಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಬಿಬಿಎಂಪಿ ಮತ್ತೆ ದಿವಾಳಿಯಾಗುವ ಭೀತಿ.....ಐನೂರು ಕೋಟಿ ಆಸ್ತಿ ತೆರಿಗೆ ಕೈಚೆಲ್ಲಿ ಕುಳಿತ ಅಧಿಕಾರಿಗಳು

ಬೆಂಗಳೂರು: ಬಿಬಿಎಂಪಿಗೆ ಐದನೂರು ಕೋಟಿ ರೂಪಾಯಿ ತೆರಿಗೆ ಹರಿದು ಬರುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದ್ದು, ಅದರ ಬದಲು ಕೆಲ ಅಧಿಕಾರಿಗಳು, ವಲಯ ಆಯುಕ್ತರು ಕೈಬಿಸಿ ಮಾಡಿಕೊಳ್ಳಲು ಅನುಕೂಲವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬಿಬಿಎಂಪಿ ಮತ್ತೆ ದಿವಾಳಿಯಾಗುವ ಭೀತಿ.....ಐನೂರು ಕೋಟಿ ಆಸ್ತಿ ತೆರಿಗೆ ಕೈಚೆಲ್ಲಿ ಕುಳಿತರಾ ಅಧಿಕಾರಿಗಳು?

ಬಿಬಿಎಂಪಿಯ ಟೋಟಲ್ ಸ್ಟೇಷನ್ ಬಿಬಿಎಂಪಿಯ ಮತ್ತೊಂದು ಬೃಹತ್ ಹಗರಣ. ಪಾಲಿಕೆ ವ್ಯಾಪ್ತಿಯಲ್ಲಿ ಮೊದಲು, ನೂರು ಕಟ್ಟಡಗಳ ಪಟ್ಟಿ ಮಾಡಲಾಗಿತ್ತು. ಸ್ವಯಂ ಆಸ್ತಿ ಘೋಷಣೆಯಡಿ, ತಪ್ಪಾಗಿ ಕಟ್ಟಡದ ವಿಸ್ತೀರ್ಣ ಘೋಷಿಸಿ, ಕಡಿಮೆ ತೆರಿಗೆ ಕಟ್ಟಿ ಪಾಲಿಕೆಗೆ ವಂಚಿಸಿದ್ದ ಒಟ್ಟು 87 ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೇ ಮಾಡಲಾಗಿತ್ತು. ಆ ವರದಿಯ ಪ್ರಕಾರ, ಒಟ್ಟು 223 ಕೋಟಿ ರೂಪಾಯಿ ತೆರಿಗೆ ಬಿಬಿಎಂಪಿಗೆ ವಂಚಿಸಿರೋದು ಬಯಲಿಗೆ ಬಂದಿತ್ತು. ವರ್ಷಕ್ಕೆ 24% ದಷ್ಟು ದಂಡ ಸೇರಿಸಿ ಐದನೂರು ಕೋಟಿ ರೂಪಾಯಿಯನ್ನು ಪಾಲಿಕೆ ವಸೂಲಿ ಮಾಡಬೇಕಿತ್ತು. ಆದ್ರೆ ಹೆಚ್ಚಿನ ಎಲ್ಲಾ ವಲಯಗಳ ಜಂಟಿ ಆಯುಕ್ತರು, ತೆರಿಗೆ ಮನ್ನಾ ಮಾಡಿ ಆಸ್ತಿ ಮಾಲೀಕರಿಗೆ ನೆರವಾಗಿ ಪಾಲಿಕೆಯ ಬೊಕ್ಕಸಕ್ಕೆ ನಷ್ಟ ಮಾಡುವುದಲ್ಲದೆ, ಬೃಹತ್ ಮೊತ್ತದ ಹಣ ವಂಚಿಸಿದ್ದಾರೆ ಎಂದು ಹೇಳಲಾಗ್ತಿದೆ.

2016-17 ರಲ್ಲಿ 87 ಕಟ್ಟಡಗಳ ವರದಿ ನೀಡಿದ ಬಳಿಕ ಆ ತೆರಿಗೆ ವಸೂಲಿ ಮಾಡಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ದಕ್ಷಿಣ ಕ್ಷೇತ್ರದಲ್ಲಿ ಓರ್ವ ಆಸ್ತಿ ಮಾಲೀಕ 1 ಕೋಟಿ ಕಟ್ಟಿದ್ದು, ಉಳಿದ ನೂರಾರು ಕೋಟಿ ರೂಪಾಯಿ ಸಂಗ್ರಹಿಸುವುದು ಬಾಕಿ ಇದೆ. ಅಷ್ಟೇ ಅಲ್ಲದೆ 2017-18, 19-20, ಅವಧಿಯಲ್ಲಿ ಟೋಟಲ್ ಸ್ಟೇಷನ್ ಸರ್ವೇ ಬಹುತೇಕ ಸ್ಥಗಿತಗೊಂಡಿದೆ. ಈ ಬಗ್ಗೆ ಪಾಲಿಕೆ ಆಡಳಿತವೂ ತಲೆಕೆಡಿಸಿಕೊಂಡಿಲ್ಲ. ಈ ಎಲ್ಲಾ ಕಾರಣದಿಂದ ಪಾಲಿಕೆಯ ಅಧಿಕಾರಿ ಹಾಗೂ ಆಡಳಿತ ಪಕ್ಷದಿಂದಲೇ ಬಿಬಿಎಂಪಿ ಮತ್ತೊಮ್ಮೆ ದಿವಾಳಿಯಾಗುತ್ತಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಇನ್ನು, ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಪ್ರತಿಪಕ್ಷ ನಾಯಕ್​ ಅಬ್ದುಲ್​ ವಾಜಿದ್​ ಅವರು, ನಮ್ಮ ಅವಧಿಯಲ್ಲಿ ಸಾಕಷ್ಟು ತೆರಿಗೆ ವಂಚಕರನ್ನು ಪಟ್ಟಿ ಮಾಡಲಾಗಿತ್ತು. ಆದರೆ ಬಳಿಕ ಜಂಟಿ ಆಯುಕ್ತರು ಈ ತೆರಿಗೆ ವಸೂಲಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನಾದರೂ ಬಿಜೆಪಿ ಆಡಳಿತ ಇದನ್ನು ವಸೂಲಿ ಮಾಡಬೇಕು. ಅಡ ಇಟ್ಟಿರುವ ಪಾಲಿಕೆ ಆಸ್ತಿಗಳ‌್ನು ಬಿಡಿಸಿಕೊಳ್ಳಬೇಕು. ಇಲ್ಲದಿದ್ರೆ ಮತ್ತಷ್ಟು ಪಾಲಿಕೆ ಆಸ್ತಿಗಳನ್ನು ಅಡವಿಡುವ ಆತಂಕ ಉಂಟಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details