ಬೆಂಗಳೂರು:ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣ ಹೆಚ್ಚಳವಾಗುತ್ತಿವೆ. ಇಂದು ಒಟ್ಟು 6 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆವೊಂದರಲ್ಲೇ ಒಟ್ಟು 5 ಪ್ರಕರಣ ಪತ್ತೆಯಾಗಿತ್ತು. ಆದ್ರೆ ದಕ್ಷಿಣ ಕನ್ನಡದಲ್ಲಿನ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇಂದು ದಕ್ಷಿಣ ಕನ್ನಡದ ಎರಡು ಶಿಕ್ಷಣ ಸಂಸ್ಥೆಗಳಿಂದ ಒಟ್ಟು 5 ಪ್ರಕರಣ ಪತ್ತೆಯಾದರೆ ಯುಕೆಯಿಂದ ಆಗಮಿಸಿದ ಓರ್ವನಲ್ಲಿ ಒಮಿಕ್ರಾನ್ ಕಾಣಿಸಿದೆ. ದಕ್ಷಿಣ ಕನ್ನಡದ ಕ್ಲಸ್ಟರ್ ಒಂದರಲ್ಲಿ ಒಟ್ಟು 14 ಕೋವಿಡ್ ಪ್ರಕರಣ ದೃಢವಾಗಿವೆ. ಇದರಲ್ಲಿ 4 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದವು.
ಕ್ಲಸ್ಟರ್ ಎರಡರಲ್ಲಿ 19 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ದರಲ್ಲಿ 1 ಒಮಿಕ್ರಾನ್ ಪ್ರಕರಣ ದೃಢಪಟ್ಟಿತ್ತು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ನಲ್ಲಿ ಮಾಹಿತಿ ನೀಡಿದ್ದಾರೆ. ಈ ಮೂಲಕದ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.