ಬೆಂಗಳೂರು: ಅಕಾಲಿಕ ಮರಣ ಹೊಂದಿದ ಪತ್ರಕರ್ತರ ಕುಟುಂಬಕ್ಕೆ ಸಿಎಂ ತಲಾ ಐದು ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡುವುದಾಗಿ ಘೋಷಿಸಿದ್ದಾರೆ.
ಅಕಾಲಿಕ ಮರಣ ಹೊಂದಿದ ಪತ್ರಕರ್ತರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ - ಪತ್ರಕರ್ತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ
ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ವೇಳೆ ಅಕಾಲಿಕ ಮರಣಕ್ಕೆ ತುತ್ತಾದ ನಾಲ್ಕು ಪತ್ರಕರ್ತರ ಕುಟುಂಬಕ್ಕೆ ಸಿಎಂ ಬಿಎಸ್ವೈ ತಲಾ ಐದು ಲಕ್ಷ ರೂ. ಪರಿಹಾರಧನ ನೀಡುವುದಾಗಿ ಘೋಷಿಸಿದ್ದಾರೆ.
ಸಿಎಂಗೆ ಮನವಿ ಸಲ್ಲಿಸಿದ ಪತ್ರಕರ್ತರು
ಇತ್ತೀಚೆಗೆ ಮರಣ ಹೊಂದಿದ್ದ ಪತ್ರಕರ್ತರಾದ ಗಜಾನನ ಹೆಗಡೆ, ಬಿ.ಆರ್.ರೋಹಿತ್, ರವಿರಾಜ ವಳಲಂಬೆ, ದಿಗಂಬರ ಗರುಡಾ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಶಕ್ತಿ ಭವನದಲ್ಲಿ ಪತ್ರಕರ್ತರ ನಿಯೋಗ ಇಂದು ಸಿಎಂರನ್ನು ಭೇಟಿಯಾಗಿ ಪರಿಹಾರ ನೀಡುವಂತೆ ಮನವಿ ಪತ್ರ ಸಲ್ಲಿಸಿತು. ಪತ್ರಕರ್ತರ ಮನವಿ ಮೇರೆಗೆ ಸಿಎಂ ಪರಿಹಾರ ಘೋಷಿಸಿದ್ದಾರೆ.