ಕರ್ನಾಟಕ

karnataka

ETV Bharat / state

ಬಂಡೆ ಉರುಳಿ ಹಳಿ ತಪ್ಪಿದ ರೈಲು: ಎಲ್ಲ ಪ್ರಯಾಣಿಕರು ಸುರಕ್ಷಿತ

ನಿನ್ನೆ ಸಂಜೆ 6.05ರ ಸುಮಾರಿಗೆ ಕಣ್ಣೂರಿನಿಂದ ಬೆಂಗಳೂರಿಗೆ ಎಕ್ಸ್​​​ಪ್ರೆಸ್ ರೈಲು ಹೊರಟ್ಟಿತ್ತು. ಆದರೆ, ಮಾರ್ಗ ಮಧ್ಯೆ ಹಳಿತಪ್ಪಿದ್ದು, ಬಳಿಕ ಪ್ರಯಾಣಿಕರ ಅನುಕೂಲಕ್ಕಾಗಿ ತೊಪ್ಪೂರಿನಿಂದ ವಿವಿಧ ಕಡೆಗೆ 15 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

5-coaches-of-kannur-bengaluru-express-derailed
ಬಂಡೆ ಉರುಳಿ ಹಳಿ ತಪ್ಪಿದ ರೈಲು: ಎಲ್ಲ ಪ್ರಯಾಣಿಕರು ಸುರಕ್ಷಿತ

By

Published : Nov 12, 2021, 10:04 AM IST

Updated : Nov 12, 2021, 12:04 PM IST

ಬೆಂಗಳೂರು:ಕಣ್ಣೂರು–ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನ (Kannur-Bengaluru Express derailed) ಏಳು ಬೋಗಿಗಳು ಶುಕ್ರವಾರ ಮುಂಜಾನೆ ಹಳಿ ತಪ್ಪಿದ್ದು, ಭಾರಿ ಅನಾಹುತ ತಪ್ಪಿದೆ. ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ತೊಪ್ಪೂರು–ಶಿವಾಡಿ (Tuppuru-Sivadi) ನಡುವೆ ಹಳಿಯ ಮೇಲೆ ಬಂಡೆಗಳು ಉರುಳಿಬಿದ್ದ ಪರಿಣಾಮ ರೈಲು ಹಳಿ ತಪ್ಪಿದೆ.

ಮುಂಜಾನೆ 3.50ರ ಸುಮಾರಿಗೆ ಸಂಚರಿಸುತ್ತಿರುವ ರೈಲಿನ ಮೇಲೆ ಬಂಡೆಗಳು ಉರುಳಿದ್ದು, ಎಲ್ಲ 2,348 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ನಿನ್ನೆ ಸಂಜೆ 6.05ರ ಸುಮಾರಿಗೆ ಕಣ್ಣೂರಿನಿಂದ ಬೆಂಗಳೂರಿಗೆ ಎಕ್ಸ್​​ಪ್ರೆಸ್ ರೈಲು ಹೊರಟ್ಟಿತ್ತು.

ಬಳಿಕ ಪ್ರಯಾಣಿಕರ ಅನುಕೂಲಕ್ಕಾಗಿ ತೊಪ್ಪೂರಿನಿಂದ ವಿವಿಧ ಕಡೆಗೆ 15 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ರೈಲ್ವೇ ಉನ್ನತ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತವು ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.

ಬಂಡೆ ಉರುಳಿ ಹಳಿ ತಪ್ಪಿದ ರೈಲು: ಎಲ್ಲ ಪ್ರಯಾಣಿಕರು ಸುರಕ್ಷಿತ

ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯವಾಣಿ ತೆರೆದಿದ್ದು, ಹೊಸೂರು 04344-222603, ಬೆಂಗಳೂರು 080-22156554 ಮತ್ತು ಧರ್ಮಪುರಿ 04342-232111 ಸಂಪರ್ಕಿಸಬಹುದಿದೆ.

ಬಂಡೆ ಉರುಳಿ ಹಳಿ ತಪ್ಪಿದ ರೈಲು

ರೈಲು ಓಡಾಟದಲ್ಲಿ ವ್ಯತ್ಯಯ

ತೊಪ್ಪೂರು - ಶಿವಾಡಿ ಮಾರ್ಗವಾಗಿ ಸಂಚರಿಸಲಿದ್ದ ರೈಲುಗಳ ಓಡಾಟದಲ್ಲಿ ವ್ಯತ್ಯವಾಗಲಿದೆ. ಕೆಎಸ್‌ಆರ್ ಬೆಂಗಳೂರು - ಎರ್ನಾಕುಲಂ ಸೂಪರ್‌ಫಾಸ್ಟ್ ಬೈಯ್ಯಪ್ಪನಹಳ್ಳಿ, ಬಂಗಾರಪೇಟೆ ಮತ್ತು ತಿರುಪತ್ತೂರ್ ಮೂಲಕ ತೆರಳಿದೆ.

ರೈಲು ಸಂಖ್ಯೆ 07236 ನಾಗರ್‌ಕೋಯಿಲ್ ಜೆಎನ್-ಕೆಎಸ್‌ಆರ್ ಬೆಂಗಳೂರು ರೈಲು 09:10ಕ್ಕೆ ಸೇಲಂ, ತಿರುಪತ್ತೂರು, ಬಂಗಾರಪೇಟೆ ಮತ್ತು ಕೆಎಸ್‌ಆರ್ ಬೆಂಗಳೂರು ಮೂಲಕ ಸಂಚರಿಸಲಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮುಂದಿನ 3 ದಿನ ಮಳೆ ಮುಂದುವರಿಕೆ; ಹವಾಮಾನ ಇಲಾಖೆ ಮುನ್ಸೂಚನೆ

Last Updated : Nov 12, 2021, 12:04 PM IST

ABOUT THE AUTHOR

...view details